SDPI, RSS ಅನ್ನೂ ಬ್ಯಾನ್ ಮಾಡಿ : ಹೆಚ್​ಸಿ ಮಹಾದೇವಪ್ಪ

ಯಾವ ಮಾನದಂಡಗಳನ್ನು ಅನುಸರಿಸಿ PFI ಸಂಘಟನೆಯನ್ನು ಬ್ಯಾನ್ ಮಾಡಿದೆಯೋ ಆ ಮಾನದಂಡಗಳು ನಿಜವಾಗಿದ್ದರೆ, ಅದು RSS, SDPI, ಭಜರಂಗ ದಳ, ಹಿಂದೂ ಪರಿಷತ್ ಹಾಗೂ ಶ್ರೀರಾಮ ಸೇನೆಯಂತಹ ಧಾರ್ಮಿಕ ತೀವ್ರವಾದಿ ಸಂಘಟನೆಗಳಿಗೂ ಅನ್ವಯಿಸುವುದರಿಂದ ಅಂತಹ ಅಸಂವಿಧಾನಿಕ ಮಾರ್ಗದ ಸಂಘಟನೆಗಳನ್ನೂ ಬ್ಯಾನ್ ಮಾಡುವುದು ಒಳ್ಳೆಯದು ಎಂದು ಮಾಜಿ ಸಚಿವ ಹೆಚ್​ಸಿ ಮಹಾದೇವಪ್ಪ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  PFI ಸಂಘಟನೆಯನ್ನು ದೇಶಾದ್ಯಂತ 5 ವರ್ಷಗಳ ಕಾಲ ಬ್ಯಾನ್ ಮಾಡುವ ತೀರ್ಪನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈಗಾಗಲೇ ದೇಶವು ಅಭಿವೃದ್ಧಿ ಮತ್ತು ಜನರಿಗೆ ಅನುಕೂಲವಾಗುವಂತಹ ವಿಷಯಗಳ ಚರ್ಚೆಯಿಂದ ದೂರವೇ ಸಾಗುತ್ತಿದ್ದು ಆ ದೂರವು ಇದೀಗ ಮತ್ತಷ್ಟು ಹೆಚ್ಚಾಗುವ ಪರಿಸ್ಥಿತಿ ಉಂಟಾಗಿದೆ.

ಕೇಂದ್ರ ಸರ್ಕಾರವು ಯಾವ ಮಾನದಂಡಗಳನ್ನು ಅನುಸರಿಸಿ PFI ಸಂಘಟನೆಯನ್ನು ಬ್ಯಾನ್ ಮಾಡಿದೆಯೋ ಆ ಮಾನದಂಡಗಳು ನಿಜವಾಗಿದ್ದರೆ, ಅದು RSS, SDPI, ಭಜರಂಗ ದಳ, ಹಿಂದೂ ಪರಿಷತ್ ಹಾಗೂ ಶ್ರೀರಾಮ ಸೇನೆಯಂತಹ ಧಾರ್ಮಿಕ ತೀವ್ರವಾದಿ ಸಂಘಟನೆಗಳಿಗೂ ಅನ್ವಯಿಸುವುದರಿಂದ ಅಂತಹ ಅಸಂವಿಧಾನಿಕ ಮಾರ್ಗದ ಸಂಘಟನೆಗಳನ್ನೂ ಬ್ಯಾನ್ ಮಾಡುವುದು ಸಮಾಜದ ಏಳಿಗೆ, ಆರೋಗ್ಯ ಮತ್ತು ಸಾಮರಸ್ಯದ ದೃಷ್ಟಿಯಿಂದ ಉತ್ತಮವಾದ ಮತ್ತು ಅಷ್ಟೇ ಜವಾಬ್ದಾರಿಯುತವಾದ ಕೆಲಸ ಎನಿಸಿಕೊಳ್ಳುತ್ತದೆ.

ಹಿಂದೂಪರ ಸಂಘಟನೆಗಳಿಂದ ಹಿಂದೂಗಳ ರಕ್ಷಣೆ ಆಗುವುದಿಲ್ಲ ಎಂಬುದಕ್ಕೆ ಮೊನ್ನೆಯ ಕೋಲಾರದ ಬಾಲಕನ ಮೇಲೆ ಹೇರಿದ ಸಂವಿಧಾನ ಬಾಹಿರವಾದ ಹಲ್ಲೆ ಮತ್ತು ಬಹಿಷ್ಕಾರವು ಒಂದು ಜೀವಂತ ಸಾಕ್ಷಿಯಾದರೆ. ಮುಸ್ಲಿಂ ಪರ ಸಂಘಟನೆಗಳಿಂದ ಮುಸ್ಲಿಮರಿಗೆ ರಕ್ಷಣೆ ಸಿಗುವುದಿಲ್ಲ ಎಂಬುದೂ ಕೂಡಾ ವಾಸ್ತವವಾಗಿದೆ.

ಬರೀ ಧರ್ಮದ ಆಧಾರದಲ್ಲಿ ಜನರಲ್ಲಿ ಭಯ ಹುಟ್ಟಿಸುವ ಇವರಿಂದ ಶ್ರಮಿಕ ಹಿಂದೂಗಳಿಗಾಗಲೀ ಶ್ರಮಿಕ ಮುಸಲ್ಮಾನರಿಗಾಗಲೀ ಯಾವುದೇ ಪ್ರಯೋಜನ ಇಲ್ಲ ಎಂದಾದ ಮೇಲೆ ಬರೀ ಜಗಳಕ್ಕೆ ಕಾರಣವಾಗುವ ಇಂತಹ ಬೇಜವಾಬ್ದಾರಿ ಸಂಘಟನೆಗಳು ಸಮಾಜಕ್ಕೆ ನಿಜಕ್ಕೂ ಬೇಕಿಲ್ಲ.

ಹೀಗಾಗಿ ಹಿಂದೂ ಮುಸ್ಲಿಂ ಎನ್ನದೇ ಸಮಾಜದ ಸಾಮರಸ್ಯ ಹಾಳು ಮಾಡುವ ಎಲ್ಲಾ ಧರ್ಮಾಧಾರಿತ ಸಂಘಟನೆಗಳನ್ನು ನಿಷೇಧಿಸಿ ಸಂವಿಧಾನದ ಆಶಯದ ರಕ್ಷಣೆ ಮಾಡುವ ಜವಾಬ್ದಾರಿ ಪ್ರಜ್ಞೆಯನ್ನು ಬೆಳೆಸಬೇಕೆಂದು ಈ ಮೂಲಕ ಸರ್ಕಾರವನ್ನು ಆಗ್ರಹಿಸುತ್ತೇನೆ ಮತ್ತು ನ್ಯಾಯಾಂಗವನ್ನು ವಿನಂತಿಸಿಕೊಳ್ಳುತ್ತೇನೆ! ಎಂದು ಕಾಂಗ್ರೆಸ್ ನಾಯಕ ಹೆಚ್​ಸಿ ಮಹಾದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪಿಎಫ್​ಐ ಮುಖಂಡ ಸುಬೇದ್​ ಹತ್ಯೆ ಪ್ರಕರಣ : 3 ಜನ ಆರ್​ಎಸ್​ಎಸ್​ ಕಾರ್ಯಕರ್ತರ ಬಂಧನ

LEAVE A REPLY

Please enter your comment!
Please enter your name here