ನಡು ರಸ್ತೆಯಲ್ಲೇ ಪರ್ಸಂಟೇಜ್ ಫಿಕ್ಸ್ : ಪಿಡಿಓ ಅಮಾನತು

PDO Amaresh

ನಡುರಸ್ತೆಯಲ್ಲಿಯೇ ಪರ್ಸಂಟೇಜ್​ ಫಿಕ್ಸ್​​ ಮಾಡಿ ಸುದ್ದಿಯಾಗಿದ್ದ ಪಾಮನಕಲ್ಲೂರು ಪಿಡಿಓ ಅಮರೇಶರನ್ನು (PDO Amaresh) ಅಮಾನತು ಮಾಡಿ ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ಆದೇಶ ಹೊರಡಿಸಿದ್ದಾರೆ.

ರಾಯಚೂರಿನ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿಯ ವಿವಿಧ ಕಾಮಗಾರಿಗಳಿಗೆ ಪಿಡಿಓ ಆಗಿದ್ದ ಅಮರೇಶ ಮೊಬೈಲ್​ನಲ್ಲಿ ಪರ್ಸಂಟೇಜ್​ ವ್ಯವಹಾರ ಕುದುರಿಸುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಅಲ್ಲದೇ, ಇದೇ ತಾಲೂಕಿನ ತೋರಣದಿನ್ನಿ ಪಂಚಾಯಿತಿಯಲ್ಲಿಯೂ ಪ್ರಭಾರಿ ಪಿಡಿಓ ಆಗಿ ಲೆಸ ಮಾಡುತ್ತಿದ್ದರೂ. ಎರಡೂ ಪಂಚಾಯಿತಿಗಳಲ್ಲಿ ಕರ್ತವ್ಯ ಲೋಪ ಹಾಗೂ ಉದ್ಯೋ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯದ ಆರೋಪ ಎದುರಿಸುತ್ತಿದ್ದರು.

ನಡುರಸ್ತೆಯಲ್ಲಿ ಪರ್ಸಂಟೇಜ್​ ವ್ಯವಹಾರದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಕಾರಣ ಕೇಳಿ ನೊಟಿಸ್ ಜಾರಿ ಮಾಡಲಾಗಿತ್ತು. ಇದೀಗ, ನೋಟಿಸ್​ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಪಿಡಿಓ ಅಮರೇಶರನ್ನು (PDO Amaresh) ಅಮಾನತುಗೊಳಿಸುವಂತೆ ರಾಯಚೂರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರಾ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : FDA ನೌಕರಿ ಕೊಡಿಸುವ ಆಮಿಷ : PSI ಅಶ್ವಿನಿ ಅಮಾನತು

LEAVE A REPLY

Please enter your comment!
Please enter your name here