BREAKING: ಪೆನ್ಸಿಲ್​ ಸಿನಿಮಾ ನಿರ್ದೇಶಕ ಹೃದಯಾಘಾತದಿಂದ ನಿಧನ

Pencil director Mani Nagaraj
Pencil director Mani Nagaraj

ನಿರ್ಮಾಪಕರೂ ಆಗಿರುವ ಪೆನ್ಸಿಲ್ (Pencil)​ ಸಿನಿಮಾದ ನಿರ್ದೇಶಕ ಮಣಿ ನಾಗರಾಜ್ (Mani Nagaraj)​ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಖ್ಯಾತ ನಿರ್ದೇಶಕ ಗೌತಮ್​ ವಾಸುದೇವ ಮೆನನ್​ ಅವರ ಜೊತೆಗೆ ಸಹಾಯಕ ನಿರ್ದೇಶಕರಾಗಿದ್ದ ಮಣಿ ನಾಗರಾಜ್​ ಅವರು 2016ರಲ್ಲಿ ಪೆನ್ಸಿಲ್​ ಸಿನಿಮಾವನ್ನು ನಿರ್ದೇಶಿಸಿದ್ದರು.

ಮಣಿ ನಾಗರಾಜ್​ ಅವರ ನಿರ್ದೇಶನದ ವಾಸುವಿನ್​ ಗರ್ಭಿಣಿಗಳ್​ ಹೆಸರಿನ ಸಿನಿಮಾ ಮುಂದಿನ ವರ್ಷ ಬಿಡುಗಡೆಗೆ ಬಾಕಿ ಇದೆ.

ಜೂನ್​ನಲ್ಲಿ ಈ ಸಿನಿಮಾದ ಪೋಸ್ಟರ್​ ರಿಲೀಸ್​ ಆಗಿತ್ತು. ವೈದ್ಯರು ಮತ್ತು ನಾಲ್ವರು ಗರ್ಭಿಣಿಯರ ಕುರಿತ ಸಿನಿಮಾ ಇದಾಗಿದೆ.

ಮಣಿ ನಾಗರಾಜ್​ ಅವರ ಅಕಾಲಿಕ ಸಾವಿಗೆ ಸಿನಿಮಾ ರಂಗ ಆಘಾತ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here