ಪೇಟಿಎಂ ಬಳಸುವ ಮುನ್ನ ಈ ಸುದ್ದಿ ಓದಿ..!

ಪೇಟಿಎಂ ಬಳಕೆದಾರರೇ ಎಚ್ಚರ..ಎಚ್ಚರ..! ನಿಮ್ಮ ಮೊಬೈಲ್‌ನಲ್ಲಿ ಪೇಟಿಎಂ ಆ್ಯಪ್‌ ಇದ್ದರೆ ನೀವು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲೇಬೇಕು.

ಭಾರತದಲ್ಲಿ ಡಿಜಿಟಲ್‌ ಪಾವತಿಯಲ್ಲಿ ಮೊದಲ ಸ್ಥಾನದಲ್ಲಿರುವ ಪೇಟಿಎಂ ಗ್ರಾಹಕರನ್ನೇ ಬಳಸಿಕೊಂಡು ಪೇಟಿಎಂ ವ್ಯಾಲೆಟ್‌ನಿಂದಲೇ ಹಣ ದೋಚುವ ಪ್ರಕರಣಗಳು ನಡೆಯುತ್ತಿವೆ. ಹಾಗಾದ್ರೆ ಹೇಗೆ ಯಾಮಾರಿಸುತ್ತಾರೆ ಎಂದು ಗಮನಿಸೋಣ.

ಇತ್ತೀಚೆಗೆ ಎಎಂಸಿ ಕಂಪನಿಯ ಸಿಇಒ ಆಗಿರುವ ವಿಕಾಸ್‌ ಎಂ ಸಚ್‌ದೇವ್‌ ಅವರ ಪೇಟಿಎಂ ಖಾತೆಯಿಂದ ಮಧ್ಯರಾತ್ರಿ 12.30ರ ಹೊತ್ತಿಗೆ 5,220 ರೂಪಾಯಿ ಎಗರಿಸಿದ್ದ.

ಹಾಗಾದ್ರೆ ಸಚ್‌ದೇವ್‌ಗೆ ಗೊತ್ತೇ ಇಲ್ಲದಂತೆ ಅಷ್ಟೊಂದು ದುಡ್ಡನ್ನು ಎಗರಿಸಿದ್ದು ಹೇಗೆ..? ಶ್ರೀ ಬಾಲಾಜಿ ಜ್ಯೂಸ್‌ ಸೆಂಟರ್‌ ಹೆಸರಿನ ಸಚ್‌ದೇವ್‌ ಅವರ ಈ-ಮೇಲ್‌ ಮತ್ತು ಪಾಸ್‌ವರ್ಡ್‌ನ್ನು ಹ್ಯಾಕ್‌ ಮಾಡಿ ಓಟಿಪಿ ಕದ್ದು ಸದ್ದೇ ಇಲ್ಲದೇ ಪೇಟಿಎಂ ವ್ಯಾಲೆಟ್‌ನಿಂದ ಕಾಸು ಲಪಟಾಯಿಸಿದ್ದ.

ಪೇಟಿಎಂ ಏನು ಮಾಡ್ತು..?

ತಮಗಾದ ತೊಂದರೆಯ ಬಗ್ಗೆ ಸಚ್‌ದೇವ್‌ ಪೇಟಿಎಂಗೆ ದೂರು ಕೊಟ್ಟರು. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದ ಪೇಟಿಎಂ ಸಚ್‌ದೇವ್‌ ಅವರ ಖಾತೆಗೆ ಅಷ್ಟೇ ಮೊತ್ತವನ್ನು ಅಂದರೆ 5,220 ರೂಪಾಯಿಯನ್ನು ಜಮೆ ಮಾಡಿತು. ತನ್ನ ಗ್ರಾಹಕರು ತೊಂದರೆ ಅನುಭವಿಸಲು ಬಿಡಲ್ಲ ಎನ್ನುವುದು ಪೇಟಿಎಂ ಹೇಳುವ ಮಾತು.

ಪೇಟಿಎಂ ಮುಖ್ಯಸ್ಥರ ಎಚ್ಚರಿಕೆ:

ಪೇಟಿಎಂ ಸಿಇಒ ಆಗಿರುವ ವಿಜಯ್‌ ಶೇಖರ್‌ ಎಲ್ಲ ಗ್ರಾಹಕರಿಗೂ ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ. ಪೇಟಿಎಂ ಹೊರತುಪಡಿಸಿ ಯಾವುದೋ ಗೊತ್ತೇ ಇಲ್ಲದ ನಂಬರ್‌ನಿಂದ ನಿಮಗೊಂದು ಮೆಸೇಜ್‌ ಬರಬಹುದು. ನಿಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಹೀಗಾಗಿ ನಿಮ್ಮ ಹಣದ ವರ್ಗಾವಣೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ ಎಂದು ಆ ಮೆಸೇಜ್‌ನಲ್ಲಿ ಇರುತ್ತೆ. ನಿಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಈ ನಂಬರ್‌ಗೆ ಕರೆ ಮಾಡಿ ಎಂದು ಆ ಮೆಸೇಜ್‌ನ ಜೊತೆಗೆ ನಂಬರ್‌ವೊಂದನ್ನೂ ಕೊಟ್ಟಿರುತ್ತಾರೆ. ಗೊಂದಲಕ್ಕೆ ಒಳಗಾಗಿ ಸಹಜವಾಗಿಯೇ ಗ್ರಾಹಕರು ಆ ನಂಬರ್‌ಗೆ ಕರೆ ಮಾಡುತ್ತಾರೆ. ಆಗ ಕೆವೈಸಿ ಮಾಹಿತಿ (ಆಧಾರ್‌, ಪ್ಯಾನ್‌, ಬ್ಯಾಂಕ್‌ ಮಾಹಿತಿಗಳನ್ನು) ನಿಮ್ಮಿಂದ ನಾಜೂಕಾಗಿ ಪಡೆದುಕೊಂಡು ನಿಮ್ಮ ಪೇಟಿಎಂ ವ್ಯಾಲೆಟ್‌ನಿಂದ ಹಣ ಎಗರಿಸಬಹುದು.

ಪೇಟಿಎಂ ಮುಖ್ಯಸ್ಥರ ಪ್ರಕಾರ ಇಂತಹ ಯಾವುದೇ ಮೆಸೇಜ್‌ಗಳನ್ನು ಪೇಟಿಎಂ ಯಾವ ಗ್ರಾಹಕರ ಮೊಬೈಲ್‌ಗೂ ಕಳುಹಿಸಲ್ಲ. ಅಥವಾ ಪೇಟಿಎಂ ಬಿಟ್ಟು ಇನ್ಯಾವುದೋ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ ಕೆವೈಸಿ ಅಪ್‌ಡೇಟ್‌ ಮಾಡಿ ಎಂದೂ ಪೇಟಿಎಂ ತನ್ನ ಗ್ರಾಹಕರಿಗೆ ಸೂಚಿಸಲ್ಲ. ಹೀಗಾಗಿ ಇಂತಹ ಮೆಸೇಜ್‌ಗಳು ಬಂದರೆ ಅದಕ್ಕೆ ಬಲಿ ಆಗಬೇಡಿ ಎಂದು ಮನವಿ ಮಾಡಿದ್ದಾರೆ.

ಹ್ಯಾಕರ್‌ಗಳಿಂದ ಬಚಾವ್‌ ಆಗುವುದು ಹೇಗೆ..?

ಮೊದಲನೆಯದಾಗಿ ನಿಮ್ಮ ಮೊಬೈಲ್‌ನಲ್ಲಿ ಇರುವಂತಹ ಹಣ ವರ್ಗಾವಣೆ ಮಾಡುವ ಯಾವುದೇ ಆಪ್ ಅಗಿರಲಿ ಅದರ ಪಾಸ್ ವರ್ಡ್ ಗಳನ್ನು ಅಗಾಗ ಬದಲಾಯಿಸುತ್ತಿರಬೇಕು.
ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳ ಜೊತೆ ಹಣದ ವ್ಯವಹಾರವಾಗಲೀ ಅಥವಾ ನಿಮ್ಮ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

LEAVE A REPLY

Please enter your comment!
Please enter your name here