ಪೇಟಿಎಂ ಪೇಮೆಂಟ್ ಬ್ಯಾಂಕ್ ತನ್ನ ಗ್ರಾಹಕರ ಮಾಹಿತಿಯನ್ನು ಚೀನಾದ ಕಂಪನಿಯೊAದಿಗೆ ಹಂಚಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಪೇಟಿಎಂ ಪೇಮೆಂಟ್ ಬ್ಯಾಂಕ್ಗೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಆರ್ಬಿಐ ನಿರ್ಬಂಧ ಹೇರಿದೆ ಎಂದು ವರದಿ ಆಗಿದೆ.
ಪೇಟಿಎಂ ಸಲ್ಲಿಕೆ ಮಾಡಿರುವ ಮಾಹಿತಿ ಪ್ರಕಾರ ಪೇಟಿಎಂ ಪೇಮೆಂಟ್ ಬ್ಯಾಂಕ್ನಲ್ಲಿ ಚೀನಾದ ಅಲಿಬಾಬಾ ಕಂಪನಿ, ಜ್ಯಾಕ್ ಮಾ ಒಡೆತನದ ಆಂಟ್ ಗ್ರೂಪ್ನ ಪಾಲುದಾರಿಕೆ ಇದೆ.
ಪೇಟಿಎಂ ಪೇಮೆಂಟ್ ಬ್ಯಾಂಕ್ನ ಸರ್ವರ್ನಿಂದ ಪಾಲುದಾರಿಕೆ ಹೊಂದಿರುವ ಚೀನಾದ ಕಂಪನಿಗಳೊAದಿಗೆ ಮಾಹಿತಿ ಹಂಚಿಕೆ ಆಗುತ್ತಿದೆ ಎಂದು ಆರ್ಬಿಐ ತಪಾಸಣೆ ವೇಳೆ ಪತ್ತೆ ಆಗಿದೆ ಎಂದು ವರದಿ ಆಗಿದೆ.
ಭಾರತದಲ್ಲಿ 30 ಕೋಟಿ ಪೇಟಿಎಂ ವ್ಯಾಲೆಟ್ ಬಳಕೆದಾರರಿದ್ದು, 6 ಕೋಟಿ ಮಂದಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಖಾತೆ ಹೊಂದಿದ್ದಾರೆ. ಪೇಟಿಎಂ ಪ್ರತಿ ತಿಂಗಳು 4 ಲಕ್ಷ ಗ್ರಾಹಕರನ್ನು ಸೇರಿಸಿಕೊಳ್ಳುತ್ತಿದೆ.
ಆರ್ಬಿಐ ನಿರ್ಬಂಧದ ಹಿನ್ನೆಲೆಯಲ್ಲಿ ಪೇಟಿಎಂ ಷೇರು ಇವತ್ತು ಕುಸಿದಿದೆ. ಷೇರು ಮೌಲ್ಯ ಶೇಕಡಾ 12ರಷ್ಟು ಕುಸಿದಿದೆ.
ಈ ನಡುವೆ ಚೀನಾದ ಕಂಪನಿಗಳೊAದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂಬ ಆರೋಪವನ್ನು ಪೇಟಿಎಂ ನಿರಾಕರಿಸಿದೆ. ಕಳೆದ ವರ್ಷದ ನವೆಂಬರ್ 18ರಂದು ದಾಖಲೆಯ 1,580 ರೂಪಾಯಿಗೆ ಜಿಗಿದಿದ್ದ ಷೇರು ಮೌಲ್ಯ ಶೇಕಡಾ 60ರಷ್ಟು ಕುಸಿದಿದೆ.
ಚೀನಾದ ಕಂಪನಿಗಳೊAದಿಗೆ ಡಾಟಾ ಹಂಚಿಕೊಳ್ಳಲಾಗಿದೆ ಎಂಬ ವರದಿ ಸುಳ್ಳು. ಪೇಟಿಎಂ ಪೇಮೆಂಟ್ ಬ್ಯಾಂಕ್ ಸ್ವದೇಶದಲ್ಲೇ ಬೆಳೆದ ಬ್ಯಾಂಕ್. ಡಾಟಾ ಲೋಕಲೈಜೇಷನ್ಗೆ ಸಂಬAಧಪಟ್ಟAತೆ ಆರ್ಬಿಐ ನಿರ್ದೇಶನಗಳಿಗೆ ಬದ್ಧರಾಗಿದ್ದೇವೆ. ಬ್ಯಾಂಕ್ ಎಲ್ಲ ಡಾಟಾವೂ ಭಾರತದಲ್ಲೇ ಇದೆ ಎಂದು ಹೇಳಿರುವ ಪೇಟಿಎಂ ಆರೋಪವನ್ನು ನಿರಾಕರಿಸಿದೆ.