ಬಿಜೆಪಿ ಭ್ರಷ್ಟಾಚಾರ: PAYCM ಪೋಸ್ಟರ್​ ಸಂಬಂಧ ಮೂವರ ಬಂಧನ

Paycm Poster Row
ಬಿಜೆಪಿ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavraj Bommai) ಸರ್ಕಾರದ ವಿರುದ್ಧ ಪೇಸಿಎಂ (PAYCM) ಹೆಸರಲ್ಲಿ ಅಂಟಿಸಲಾಗಿದ್ದ ಪೋಸ್ಟರ್​ ಸಂಬಂಧ ಬೆಂಗಳೂರಿನ ಪೊಲೀಸರು (Bengaluru Police) ಮೂವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ (KPCC) ಸಾಮಾಜಿಕ ತಾಲತಾಣದ (Social Media) ಮುಖ್ಯಸ್ಥ ಬಿ ಆರ್​ ನಾಯ್ಡು ( B R Naidu), ಪವನ್​ ಮತ್ತು ಗಗನ್​ ಅವರನ್ನು ಬೆಂಗಳೂರಿನ ಹೈಗ್ರೌಂಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈಗ್ರೌಂಡ್ಸ್​ ಠಾಣೆಗೆ (High Ground Police) ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ (D K Shivakumar), ಶಾಸಕ ಅಜಯ್​ ಸಿಂಗ್​ (MLA Ajay Singh)​ ಆಗಮಿಸಿದ್ದಾರೆ. ಠಾಣೆ ಎದುರು ಕಾಂಗ್ರೆಸ್​ ಕಾರ್ಯಕರ್ತರ ಜಮಾವಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ.
ಡಿಕೆಶಿ ಅವರ ಜೊತೆಗೆ ಶಾಸಕ ಪ್ರಿಯಾಂಕ್​ ಖರ್ಗೆ (Priyank Kharge), ಮಾಜಿ ಅಡ್ವೋಕೇಟ್​ ಜನರಲ್​ ಮತ್ತು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಝ ಮತ್ತು ವಕೀಲ ಸೂರ್ಯ ಮುಕುಂದರಾಜ್​ ಕೂಡಾ ಠಾಣೆಗೆ ಆಗಮಿಸಿದ್ದಾರೆ.

LEAVE A REPLY

Please enter your comment!
Please enter your name here