Paycm Poster : ಪೇಟಿಎಂ ಮಾದರಿಯಲ್ಲಿ ಪೇಸಿಎಂ ಪೋಸ್ಟರ್ ಅಂಟಿಸಿ ವಿನೂತನ ಪ್ರತಿಭಟನೆ

Paycm Poster Row

ಗುತ್ತಿಗೆದಾರರಿಂದ 40 ಪರ್ಸೆಂಟ್‌ ಕಮಿಷನ್‌ ಪಡೆಯುವ ಆರೋಪ ಹೊತ್ತಿರುವ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸರ್ಕಾರದ ವಿರುದ್ಧದ ಆರೋಪವನ್ನು ಅಣಕಿಸುವ ಪೋಸ್ಟರ್‌ನ್ನು ನಗರದ ಹಲವೆಡೆ ಕಾಂಗ್ರೆಸ್ ಅಂಟಿಸಿದೆ. ಪೇಟಿಎಂ ಮಾದರಿಯಲ್ಲೇ ಪೇ ಸಿಎಂ (Paycm Poster) ಎಂಬ ಪೋಸ್ಟರ್‌ ವೈರಲ್‌ ಆಗಿದೆ.

ನಗರದ ಜಯಮಹಲ್‌ ರಸ್ತೆ, ಇಂಡಿಯನ್ ಎಕ್ಷ್‌ಪ್ರೆಸ್‌ ಬಳಿ ಗೋಡೆಗೆ ಪೇ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೋಸ್ಟರ್‌ ಅಂಟಿಸುವ ಮೂಲಕ ಭ್ರಷ್ಟ ಸರ್ಕಾರ ಎಂದು ಅಣಕಿಸಲಾಗಿದೆ. 40% accepted here ಎಂದು ಪೋಸ್ಟರ್‌ನಲ್ಲಿ ಒಕ್ಕಣೆ ಬರೆಯಲಾಗಿದೆ.

ಪೇಟಿಎಂ ಮಾದರಿಯಲ್ಲಿ ಪೇ ಸಿಎಂ (Paycm Poster) ಎಂದು ಕ್ಯೂಆರ್ ಕೋಡ್ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ‌ ಫೋಟೋ ಹಾಕಲಾಗಿದೆ. ಇದನ್ನು ಸ್ಕ್ಯಾನ್‌ ಮಾಡಿದರೆ 40% ಸ್ಕ್ಯಾಮ್ ಸ್ಟಾರ್ಸ್ ಎನ್ನುವ ಕಾಂಗ್ರೆಸ್​​ನ ಬಿಜೆಪಿ ಸರ್ಕಾರದ ವಿರುದ್ಧ ಆರಂಭಿಸಿರುವ ಪೇಜ್‌ ಓಪನ್‌ ಆಗುತ್ತದೆ. ಇದನ್ನು ಸ್ಕ್ಯಾನ್ ಮಾಡಿದವರ ಸಂಖ್ಯೆ ಇಲ್ಲಿಯವರೆಗೆ 95,428 ಆಗಿದೆ. ಸ್ಕ್ಯಾನ್ ಮಾಡಿದ ಕೂಡಲೇ ಅಭಿಯಾನಕ್ಕೆ ಆ್ಯಡ್ ಆಗಿದ್ದೀರಿ ಎಂದು ಮೆಸೇಜ್ ಬರುತ್ತದೆ.  ಇದನ್ನೂ ಓದಿ : Bharat Jodo Yatra : ತರಕಾರಿ ಅಂಗಡಿಯಲ್ಲಿ ದೇಣಿಗೆ ಕೇಳಿದ್ದ ಕಾರ್ಯಕರ್ತರ ಕಾಂಗ್ರೆಸ್ ವಜಾ

LEAVE A REPLY

Please enter your comment!
Please enter your name here