ADVERTISEMENT
ಜನಸೇನಾ ಪಕ್ಷದ ಮೂಲಕ ಆಂಧ್ರದಲ್ಲಿ ಮತ್ತೊಮ್ಮೆ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟ ಪವನ್ ಕಲ್ಯಾಣ್ ಬಿಜೆಪಿ ಒಕ್ಕೂಟದ ತೆಕ್ಕೆಗೆ ಸೇರಿದ್ದಾರೆ.
ಜುಲೈ 18ರಂದು ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಎನ್ಡಿಎ ಸಭೆಯಲ್ಲಿ ಪವನ್ ಕಲ್ಯಾಣ್ ಭಾಗವಹಿಸಲಿದ್ದಾರೆ.
ಜನಸೇನಾ ಪಕ್ಷದ ರಾಜಕೀಯ ವ್ಯವಹಾಗಳ ಸಮಿತಿ ಅಧ್ಯಕ್ಷ ನಂದೇಡ್ಲಾ ಮನೋಹರ್ ಕೂಡಾ ಎನ್ಡಿಎ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಎನ್ಡಿಎ ಸಭೆಗೆ ಬರುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ಗೆ ಪತ್ರ ಬರೆದಿದ್ದರು.
ಈ ಮೂಲಕ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನಸೇನಾ ಮೈತ್ರಿ ಮಾಡಿಕೊಳ್ಳುವುದು ಖಚಿತವಾಗಿದೆ.
2020ರ ಜನವರಿಯಲ್ಲಿ ಬಿಜೆಪಿ ಮತ್ತು ಜನಸೇನಾ ಮೈತ್ರಿ ಮಾಡಿಕೊಂಡಿತ್ತಾದರೂ ಆಂಧ್ರ ವಿಭಜನೆ ವೇಳೆ ಘೋಷಿಸಲಾಗಿದ್ದ ಭರವಸೆಗಳು ಈಡೇರಿಲ್ಲ ಎಂಬ ಕಾರಣಕ್ಕೆ ಎರಡೂ ಪಕ್ಷಗಳ ನಂಟು ಬಿಗಾಡಿಯಿಸಿತ್ತು.
2024ರಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಹಿಂಜರಿಯಲ್ಲ ಎಂದು ಪವನ್ ಕಲ್ಯಾಣ್ ಘೋಷಿಸಿದ್ದರು.
ADVERTISEMENT