ADVERTISEMENT
ಪವಿತ್ರ ಲೋಕೇಶ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಆದರೆ, ಟಾಲಿವುಡ್ ನಟ ನರೇಶ್ ಜೊತೆಗಿನ ಪ್ರೇಮಾಯಣದ ಬಳಿಕ ಪವಿತ್ರ ಲೋಕೇಶ್ ಟಾಲಿವುಡ್ನಲ್ಲಿ ಇನ್ನಷ್ಟು ಪಾಪುಲರ್ ಆದರು.
ಕಳೆದ ಕೆಲ ತಿಂಗಳಿಂದ ರಿಲೇಶನ್ನಲ್ಲಿ ಇರುವ ಈ ಜೋಡಿ ಶೀಘ್ರವೇ ಮದುವೆ ಕೂಡ ಆಗಲಿದೆ. ಈ ವಿಚಾರವನ್ನು ನಟ ನರೇಶ್ ಬಹಿರಂಗವಾಗಿ ಪ್ರಕಟಿಸಿದ್ದಾರೆ.ಇವರಿಬ್ಬರು ಜೋಡಿಯಾಗಿ ನಟಿಸಿರುವ ಮತ್ತೆ ಮದುವೆ ಚಿತ್ರ ಮೊನ್ನೆಯಷ್ಟೇ ರಿಲೀಸ್ ಆಗಿದೆ.
ವಾಸ್ತವದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಪವಿತ್ರ ಲೋಕೇಶ್, ಯಾವುದೇ ಸಿನಿಮಾಗಳಲ್ಲಿ ನಟಿಸಲು ದಿನಕ್ಕೆ 50 ಸಾವಿರ ರೂಪಾಯಿ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದರಂತೆ.
ಆದರೆ, ನರೇಶ್ ಜೊತೆ ಪ್ರೇಮ ವ್ಯವಹಾರದಿಂದ ಪವಿತ್ರ ಲೋಕೇಶ್ ಇನ್ನಷ್ಟು ಫೇಮಸ್ ಆಗಿಬಿಟ್ಟಿದ್ದಾರೆ. ಇದರೊಂದಿಗೆ ಪವಿತ್ರ ಲೊಕೇಶ್ ತಮ್ಮ ದಿನದ ರೆಮ್ಯುನರೇಷನ್ ಕೂಡ ಹೆಚ್ಚಿಸಿದ್ದಾರಂತೆ.
ಸದ್ಯ ಒಂದು ದಿನ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ನಟಿ ಪವಿತ್ರ ಲೊಕೇಶ್ ಒಂದು ಲಕ್ಷ ರೂಪಾಯಿವರೆಗೂ ಡಿಮ್ಯಾಂಡ್ ಮಾಡುತ್ತಿದ್ದಾರೆ. ಆಕೆಗಿರುವ ಕ್ರೇಜ್ ಕಾರಣ ಆಕೆ ಕೇಳಿದಷ್ಟು ರೆಮ್ಯುನರೇಷನ್ ನೀಡಲು ನಿರ್ಮಾಪಕರು ಕೂಡ ಮುಮದಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಪವಿತ್ರ ಲೋಕೇಶ್ಗೆ ಪ್ರಸ್ತುತ ಕೈತುಂಬಾ ಸಿನಿಮಾ ಆಫರ್ಗಳು ಬರುತ್ತಿವೆ. ತಮ್ಮ ಬಗ್ಗೆ ಬರುತ್ತಿರುವ ಟ್ರೋಲ್ಗಳ ಬಗ್ಗೆ ತಲೆಕೆಡಿಸಿಕೊಳ್ಳದ ಪವಿತ್ರ ಲೋಕೇಶ್ ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿ ಆಗಿದ್ದಾರೆ.
ADVERTISEMENT