ಪವನ್ ಕಲ್ಯಾಣ್ ಹತ್ಯೆಗೆ ಸೂಪಾರಿ ಕಿಲ್ಲರ್ಸ್ ಸಂಚು

ನನಗೆ ಪ್ರಾಣಹಾನಿ ಇದೆ. ವಿಶೇಷವಾಗಿ ನನ್ನನ್ನು ಮುಗಿಸಲು ಸುಪಾರಿ ಪಡೆಗಳನ್ನು ಫಿಲ್ಡಿಗೆ ಇಳಿಸಿದ್ದಾರೆ ಎಂಬ ಮಾಹಿತಿ ಇದೆ ಎಂಬ ಆತಂಕಕಾರಿ ವಿಚಾರವನ್ನು ಜನಸೇನಾನಿ. ನಟ ಪವನ್ ಕಲ್ಯಾಣ್​ ತಿಳಿಸಿದ್ದಾರೆ.

ಶನಿವಾರ ರಾತ್ರಿ ಕಾಕಿನಾಡದಲ್ಲಿ ಮಾತನಾಡಿದ ಪವನ್ ಕಲ್ಯಾಣ್​ ಜನಸೇನಾ ನಾಯಕರು, ಜನಸೈನಿಕರು, ವೀರ ಮಹಿಳೆಯರು ಕಡ್ಡಾಯವಾಗಿ ಭದ್ರತಾ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ಜನಸೇನೆ ಬಲಿಷ್ಠವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಜಗನ್ ಸರ್ಕಾರವನ್ನು ಸೋಲಿಸುವತ್ತ ಹೆಜ್ಜೆ ಇಡುತ್ತಿದೆ. ಇಂತಹ ಸಮಯದಲ್ಲಿ ಅವರು ಏನು ಬೇಕಾದರು ಮಾಡುತ್ತಾರೆ.

ಅಧಿಕಾರ ಹೋಗುತ್ತೆ ಎಂಬ ಭಾವನೆ ನಾಯಕರನ್ನು ಕ್ರೂರರನ್ನಾಗಿಸುತ್ತದೆ ಎಂದು ಪವನ್ ಕಲ್ಯಾಣ್ ಅಭಿಪ್ರಾಯಪಟ್ಟರು. ಈ ಮೂಲಕ ನೇರವಾಗಿ ಜಗನ್ ಸರ್ಕಾರದ ವಿರುದ್ಧ ಆರೋಪ ಮಾಡಿದರು.

ನಾನು ನಟನಾಗಿರದೇ ಕೇವಲ ರಾಜಕಾರಣಿಯಾಗಿದ್ದಲ್ಲಿ ಜನರ ನಡುವೆ ಹೋಗುತ್ತಿದ್ದೆ. ಆದರೆ, ಅಭಿಮಾನಿಗಳ ಅಭಿಮಾನ ತನ್ನನ್ನು ತಡೆಯುತ್ತಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.