ಪರೇಶ್ ಮೆಸ್ತಾ(Paresh Mesta) ಕೊಲೆ ಪ್ರಕರಣದ ಆರೋಪಿಗೆ ಬಿಜೆಪಿ ಸರ್ಕಾರ ಜಿಲ್ಲಾ ವಕ್ಪ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರೇಶ್ ಮೆಸ್ತಾ(Paresh Mesta) ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ಆರೋಪಿಯಾಗಿದ್ದ ಅಜಾದ್ ಅಣ್ಣಿಗೇರಿ ಎನ್ನುವವರಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪರೇಶ್ ಮೆಹ್ತಾ ಕೊಲೆ ಪ್ರಕರಣವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು.
ಇದನ್ನೂ ಓದಿ : GST: ಮನೆ ಬಾಡಿಗೆಗೂ ಜಿಎಸ್ಟಿ..!
ಪರೇಶ್ ಮೆಸ್ತಾ ಪ್ರಕರಣವನ್ನ ಸಿಬಿಐಗೆ ವಹಿಸಿ ಅಂದಿನ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಅಂದು ಪ್ರತಿಭಟಿಸಿದ್ದ ಬಿಜೆಪಿಯೇ ಇದೀಗ ತನ್ನ ಸರ್ಕಾರದ ಅವಧಿಯಲ್ಲಿ ಆರೋಪಿತನಿಗೆ ವಕ್ಘ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಿದೆ.
ಅಜಾದ್ ಅಣ್ಣಗೇರಿ ನೇಮಕವಾಗುತ್ತಿದ್ದಂತೆಯೇ ಕಾರ್ಯಕರ್ತರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಪದಾಧಿಕಾರಿಗಳನ್ನ ಬದಲಿಸುವಂತೆ ವಕ್ಫ್ ಬೋರ್ಡ್ ಅಧ್ಯಕ್ಷ ಅನೀಷ್ ತಹಶಿಲ್ದಾರ್ ಸಚಿವರಿಗೆ ಪತ್ರ ಬರೆದಿದ್ದಾರೆ.
(ನಟ ಗಣೇಶ್, ದಿಗಂತ್, ಪವನ್ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)