ದೇಶಾದ್ಯಂತ ಎನ್‍ಆರ್‍ಸಿ; ಮೋದಿ ಮಾತು ಸತ್ಯನಾ..? ಷಾ ಮಾತು ಸತ್ಯನಾ..?

ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರ ಒಂದು ಹೆಜ್ಜೆ ಹಿಂದೆ ಇಟ್ಟಂತೆ ಕಾಣುತ್ತಿದೆ. ದೇಶಾದ್ಯಂತ ಎನ್‍ಆರ್‍ಸಿ ಜಾರಿ ಕುರಿಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಭಿನ್ನ ಹೇಳಿಕೆ ನೀಡಿದ್ದಾರೆ.

ದೇಶದ 130 ಕೋಟಿ ಪ್ರಜೆಗಳಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತಿದ್ದೇನೆ.2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ದೇಶಾದ್ಯಂತ ಎನ್‍ಆರ್‍ಸಿ ಜಾರಿ ಮಾಡುವ ಬಗ್ಗೆ ಚರ್ಚೆಯೇ ನಡೆಸಿಲ್ಲ.ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಅಸ್ಸಾಂನಲ್ಲಿ ನಾವು ಜಾರಿ ಮಾಡಬೇಕಾಯ್ತು

ಎಂದು ದೆಹಲಿಯಲ್ಲಿ ನಡೆದ ರ್ಯಾಲಿ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಡಿಸೆಂಬರ್ 9ರಂದು ಲೋಕಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ,

ದೇಶದಲ್ಲಿ ಎನ್‍ಆರ್‍ಸಿ ಬರಲಿದೆ. ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಮಗರ್ ಮನ್ ಕೆ ಚಲಿಯೇ ಎನ್‍ಆರ್‍ಸಿ ಆನೇವಾಲಿ ಹೈ. ಎನ್‍ಆರ್‍ಸಿಯನ್ನು ದೇಶ ಒಪ್ಪಿಕೊಳ್ಳಲೇಬೇಕು

ಎಂದು ಘಂಟಾಘೋಷವಾಗಿ ಸಾರಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿ ರ್ಯಾಲಿಯಲ್ಲಿ ಆಡಿರುವ ಮಾತಿಗೂ, ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಸಭೆ ಕೊಟ್ಟಿದ್ದ ಸ್ಪಷ್ಟ ಸಂದೇಶಕ್ಕೂ ಒಂದಕ್ಕೊಂದು ತಾಳೆ ಆಗುತ್ತಿಲ್ಲ. ಜೊತೆಗೆ ವಿರೋಧಾಭಾಸದಿಂದ ಕೂಡಿವೆ. ಇದು ಜನರನ್ನು ಗೊಂದಲಕ್ಕೆ ತಳ್ಳುತ್ತಿದೆ. ಇದನ್ನು ಪ್ರಸ್ತಾಪಿಸಿರುವ ವಿರೋಧ ಪಕ್ಷ ಕಾಂಗ್ರೆಸ್, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದೆ.

LEAVE A REPLY

Please enter your comment!
Please enter your name here