ಏಪ್ರಿಲ್​ 1ರಿಂದ ದಂಡ ಕಟ್ತೀವಿ ಅಂದ್ರೂ PAN​-ಆಧಾರ್​ ಜೋಡಿಸಕ್ಕಾಗಲ್ಲ..!

ಪ್ಯಾನ್​ ಕಾರ್ಡ್​​ಗೆ (PAN Card)ಗೆ ಆಧಾರ್​ ಕಾರ್ಡ್​ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಮಾರ್ಚ್​ 31ರೊಳಗೆ ಆಧಾರ್​ ಕಾರ್ಡ್​ನ್ನು ಪ್ಯಾನ್​ ಕಾರ್ಡ್​​ಗೆ ಜೋಡಿಸದೇ ಹೋದರೆ PAN Card​​ ನಿಷ್ಕ್ರಿಯಗೊಳಲಿದೆ.
1 ಸಾವಿರ ರೂಪಾಯಿ ದಂಡ:
ಪ್ಯಾನ್​ ಕಾರ್ಡ್​ಗೆ ಆಧಾರ್​ ಕಾರ್ಡ್​ನ್ನು ಜೋಡಿಸುವ ವೇಳೆ 1 ಸಾವಿರ ರೂಪಾಯಿ ದಂಡ ಕಟ್ಟುವುದು ಕಡ್ಡಾಯವಾಗಿದೆ.
1 ಸಾವಿರ ರೂಪಾಯಿ ದಂಡ ಕಟ್ಟಿ ಪ್ಯಾನ್​-ಆಧಾರ್​ ಜೋಡಣೆಗೆ ಮಾರ್ಚ್​ 31ರವರೆಗೆ ಮಾತ್ರ ಸಮಯ ನೀಡಲಾಗಿದೆ.
ದಂಡ ಕಟ್ತೀವಿ ಅಂದ್ರೂ ಆಗಲ್ಲ:
ಮಾರ್ಚ್​ 31ರೊಳಗೆ ಪ್ಯಾನ್​-ಆಧಾರ್​ ಜೋಡಣೆಯಾಗದೇ ಇದ್ದರೆ ಆಗ ಪ್ಯಾನ್​ ಕಾರ್ಡ್​ ನಿಷ್ಕ್ರಿಯವಾಗಲಿದೆ.  ಏಪ್ರಿಲ್​ 1ರಿಂದ ಪ್ಯಾನ್​-ಆಧಾರ್​ ಜೋಡಣೆಗೆ ಅವಕಾಶ ಇರಲ್ಲ.
ಆರಂಭದಲ್ಲಿ 500 ರೂ. ದಂಡ:
ಮಾರ್ಚ್​ 2022ರಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಆದೇಶದಲ್ಲಿ ಪ್ಯಾನ್​ ಕಾರ್ಡ್​​ಗೆ ಮಾರ್ಚ್​ 31, 2022ರೊಳಗೆ ಆಧಾರ್​ ಜೋಡಣೆ ಮಾಡುವುದು ಕಡ್ಡಾಯ ಎಂದು ತಿಳಿಸಿತ್ತು.
ಮಾರ್ಚ್​ 2022ರೊಳಗೆ ಆಧಾರ್​ ಸಂಖ್ಯೆಯನ್ನು ಪ್ಯಾನ್​ಗೆ ಜೋಡಣೆ ಮಾಡದೇ ಹೋದರೆ 500 ರೂಪಾಯಿ ದಂಡ ಕಟ್ಟಿ ಜೂನ್​ 30, 2022ರೊಳಗೆ ಜೋಡಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ಕಳೆದ ವರ್ಷ ಜುಲೈನಿಂದಲೇ 1 ಸಾವಿರ ದಂಡ:
ಜುಲೈ 1,2022ರಿಂದ ಆಧಾರ್​-ಪ್ಯಾನ್​ ಕಾರ್ಡ್​ ಜೋಡಣೆಗೆ 1 ಸಾವಿರ ರೂಪಾಯಿ ದಂಡ ಕಟ್ಟಬೇಕಿತ್ತು.
ಅಂದರೆ 1 ಸಾವಿರ ರೂಪಾಯಿ ದಂಡದ ಮೊತ್ತ ಕಳೆದ ವರ್ಷದ ಜುಲೈನಿಂದಲೇ ಜಾರಿಯಲ್ಲಿದೆ.
ಪ್ಯಾನ್​ಗೆ ಆಧಾರ್​ ಜೋಡಣೆ ಅನಿವಾರ್ಯ ಯಾಕೆ..?
1. ಈ ತಿಂಗಳ 31 ಅಂದರೆ ಮಾರ್ಚ್​ 31ರೊಳಗೆ ಪ್ಯಾನ್​ಗೆ ಆಧಾರ್​ ಜೋಡಣೆ ಮಾಡದೇ ಹೋದರೆ ಪ್ಯಾನ್​ ಕಾರ್ಡ್​ ನಿಷ್ಕ್ರಿಯವಾಗುತ್ತದೆ.
2. ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ಸೆಕ್ಷನ್​ 139ಎ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಕಂಪನಿ ಒದಕ್ಕಿಂತ ಹೆಚ್ಚು ಪ್ಯಾನ್​ ಕಾರ್ಡ್​​ಗಳನ್ನು ಹೊಂದುವಂತಿಲ್ಲ.
ಒಂದು ವೇಳೆ ಒಂದಕ್ಕಿಂತ ಹೆಚ್ಚು ಪ್ಯಾನ್​ ಕಾರ್ಡ್​ ಹೊಂದಿದ್ದು ಕಂಡುಬಂದರೆ 10 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು. ಜೊತೆಗೆ ಆದಾಯ ತೆರಿಗೆ ಇಲಾಖೆ ಇಂತಹವರ ವಿರುದ್ಧ ಇತರೆ ಕಾನೂನು ಕ್ರಮಗಳನ್ನೂ ಕೈಗೊಳ್ಳಬಹುದು.
3. ಹಣಕಾಸು ವ್ಯವಹಾರಗಳಿಗೆ ಪ್ಯಾನ್​ ಕಾರ್ಡ್​ ಐಡಿ:
ಈ ವರ್ಷದ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಪ್ಯಾನ್​ ಕಾರ್ಡ್​ನ್ನೇ ಎಲ್ಲ ರೀತಿಯ ಹಣಕಾಸು ವ್ಯವಹಾರಗಳಿಗೆ ಸಾಮಾನ್ಯ ಗುರುತಿನ ಚೀಟಿ (ID) ಎಂದು ಪರಿಗಣಿಸಿದೆ.
ಸದ್ಯ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವ್ಯವಹಾರಗಳಿಗೆ ಜಿಎಸ್​ಟಿಎನ್ (GSTIN), ತೆರಿಗೆ ಪಾವತಿದಾರರ ಸಂಖ್ಯೆ (TIN), ತೆರಿಗೆ ಕಡಿತ ಖಾತೆ ಸಂಖ್ಯೆ (TDA), ಕಾರ್ಮಿಕರ ಪಿಂಚಣಿ ನಿಧಿ (EPFO), ಕಾರ್ಪೋರೇಟರ್​ ಗುರುತಿನ ಸಂಖ್ಯೆ (CIN)ಗಳನ್ನು ಉದ್ಯಮ ಸ್ಥಾಪನೆ, ಅನುಮತಿ ಮತ್ತು ಇತರೆ ಹಣಕಾಸು ವ್ಯವಹಾರಗಳಿಗೆ ಸಲ್ಲಿಕೆ ಮಾಡಬೇಕಿತ್ತು.
ಆದರೆ PAN Card ಸಾಮಾನ್ಯ ಹಣಕಾಸು ಗುರುತಿನ ಚೀಟಿ ಆದ ಕಾರಣ ಇನ್ಮುಂದೆ ಪ್ಯಾನ್​ ಕಾರ್ಡ್​ ದಾಖಲೆ ಸಲ್ಲಿಸಿದರೆ ಸಾಕು. ಇದರಿಂದ ಪ್ರಕ್ರಿಯೆಗಳು ಸರಳೀಕರಣ ಆಗಲಿವೆ.
4. ಬ್ಯಾಂಕ್​​ ಖಾತೆಗಳಿಗಾಗಿ ಪ್ಯಾನ್​ ಕಾರ್ಡ್ ದಾಖಲೆ ಸಲ್ಲಿಕೆ​ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಪ್ಯಾನ್​ -ಆಧಾರ್​ ಜೋಡಣೆ ಮಹತ್ವ ಪಡೆದಿದೆ.