ಪ್ಯಾನ್ಗೆ ಆಧಾರ್ ಜೋಡಣೆಯ ಅವಧಿಯಲ್ಲಿ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ.
ಈ ವರ್ಷದ ಜೂನ್ 30ರವರೆಗೆ ಪ್ಯಾನ್ ಕಾರ್ಡ್ಗೆ ಆಧಾರ್ ಜೋಡಣೆಗೆ ಅವಕಾಶ ನೀಡಲಾಗಿದೆ.
ಆದರೆ ಪಾವತಿಸಬೇಕಾಗಿರುವ 1 ಸಾವಿರ ರೂಪಾಯಿ ದಂಡದ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಆಧಾರ್ ಲಿಂಕ್ ಮಾಡದ ಪ್ಯಾನ್ ಕಾರ್ಡ್ಗಳು ಈ ವರ್ಷದ ಜುಲೈನಿಂದ ನಿಷ್ಕ್ರಿಯ ಆಗ್ತವೆ. ಅಂತಹ ನಿಷ್ಕ್ರಿಯ ಆದ ಪ್ಯಾನ್ ಕಾರ್ಡ್ಗಳಿಗೆ 30 ದಿನಗಳ ಬಳಿಕ 1 ಸಾವಿರ ರೂಪಾಯಿ ದಂಡ ಪಾವತಿಸಿ ಮತ್ತೆ ಆಕ್ಟೀವೇಟ್ ಮಾಡಿಕೊಳ್ಳಬಹುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ADVERTISEMENT
ADVERTISEMENT