ಪಾಕಿಸ್ತಾನದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪರ್ವೇಜ್ ಮುಷರಫ್ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ವಕ್ತ್ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ದುಬೈನಲ್ಲಿನ ಅಮೇರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಅನಾರೋಗ್ಯದಿಂದ ಕೋಮಾಗೆ ಹೋಗಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ.
78 ವರ್ಷದ ಮುಷರಪ್ 1999 ರಿಂದ 2008 ರ ವರೆಗೆ ಪಾಕಿಸ್ತಾನದ ಸರ್ವಾಧಿಕಾರಿ ಅಧ್ಯಕ್ಷರಾಗಿದ್ದರು.
ಪಾಕಿಸ್ತಾನದ ಸೇನಾಧಿಕಾರಿಯಾಗಿದ್ದ ಈತ 1999 ರಲ್ಲಿ ನವಾಜ್ ಷರೀಪ್ ನೇತೃತ್ವದ ಪ್ರಜಾಪ್ರಭುತ್ವದ ಸರ್ಕಾರವನ್ನು ರಕ್ತ ರಹಿತ ಕ್ರಾಂತಿಯಿಂದ ಕೆಳಗಿಸಿ ಪಾಕಿಸ್ತಾನದ ಸರ್ವಾಧಿಕಾರಿ ಅಧ್ಯಕ್ಷನಾಗಿದ್ದ.