ಮುರುಘಾ ಶ್ರೀ ಮೇಲೆ ಕೇಸ್ : ಬಸವಶ್ರೀ ಪ್ರಶಸ್ತಿ ಹಿಂತಿರುಗಿಸಿದ ಪಿ ಸಾಯಿನಾಥ್

P Sayinath

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಇದೇ ಮಠದಿಂದ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿದ್ದ ಪತ್ರಕರ್ತ ಪಿ ಸಾಯಿನಾಥ್ (P Sayinath) ಇಂದು ಪ್ರಶಸ್ತಿ ಹಿಂತಿರುಗಿಸಿದ್ದಾರೆ.

2016 ರಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಯಿನಾಥ್ ಅವರ ಸಾಧನೆಯನ್ನು ಗುರುತಿಸಿ ಮುರುಘಾ ಮಠದಿಂದ ಬಸವಶ್ರೀ ಪ್ರಶಸ್ತಿ ನೀಡಲಾಗಿತ್ತು. ಈ ಪ್ರಶಸ್ತಿ 5 ಲಕ್ಷ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಇದೀಗ, ಪಿ ಸಾಯಿನಾಥ್ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.

ಇದನ್ನೂ ಓದಿ : ಮುರುಘಾ ಮಠದ ಇತಿಹಾಸ ಮತ್ತು ಪರಂಪರೆ!

ಪ್ರಶಸ್ತಿ ಹಿಂತಿರುಗಿಸಿರುವ ಸಾಯಿನಾಥ್ (P Sayinath) ಮಠದ ಸ್ವಾಮೀಜಿ ಹೈಸ್ಕೂಲ್ ಮಕ್ಕಳ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಈ ಹಿಂದೆ ಗದ್ದರ್, ವಂದನಾ ಶಿವ, ಶಬಾನಾ ಅಜ್ಮಿ, ಕಿರಣ್ ಬೇಡಿ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಡಾ. ಎಚ್. ಸುದರ್ಶನ್, ಸ್ವಾಮಿ ಅಗ್ನಿವೇಶ್, ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಸೇರಿದಂತೆ ಹಲವು ಗಣ್ಯರು ಪ್ರತಿಷ್ಠಿತ ಬಸವಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಇದನ್ನೂ ಓದಿ : ಮುರುಘಾ ಸ್ವಾಮೀಜಿ ಈಗ ವಿಚಾರಣಾಧೀನ ಕೈದಿ 2261

LEAVE A REPLY

Please enter your comment!
Please enter your name here