ಮಥುರಾದ ಶ್ರೀಕೃಷ್ಣ ದೇವಾಲಯದಲ್ಲಿ ಜನದಟ್ಟಣೆ – ಇಬ್ಬರು ಸಾವು

Mathura Temple

ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆ ಉತ್ತರ ಪ್ರದೇಶದ ಮಥುರಾ ದೇವಾಲಯದಲ್ಲಿ(Mathura Temple) ಶುಕ್ರವಾರ ಜನದಟ್ಟಣೆ ಉಂಟಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹಠಾತ್ತನೆ ಏರಿಕೆಯಾಗಿ, ಆರತಿಯ ಸಮಯ ದೇವಾಲಯದ ಒಳಗೆ ಜನರು ನುಗ್ಗಲಾರಂಭಿಸಿದರು. ಈ ವೇಳೆ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇನ್ನೂ 6 ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಥುರಾದ ಹಿರಿಯ ಪೊಲೀಸ್ ಅಭಿಷೇಕ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ : ಶ್ರೀಕೃಷ್ಣ ಜನ್ಮಾಷ್ಠಮಿ: ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

ಮಥುರಾವ(Mathura Temple) ನ್ನು ಕೃಷ್ಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಪುರಾಣಗಳ ಪ್ರಕಾರ, ಶ್ರೀಕೃಷ್ಣನ ಜನನ ಮಧ್ಯರಾತ್ರಿಯಲ್ಲಿ ನಡೆದಿದ್ದು, ಈ ವೇಳೆಯ ಮಂಗಳಾರತಿಗೆ ಜನರು ಪ್ರಸಾದವನ್ನು ಸ್ವೀಕರಿಸಲು ಮುಂದಾಗಿದ್ದಾರೆ.

ಘಟನೆಗೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಥುರಾದ ಕೃಷ್ಣ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಿ, ರಾಜ್ಯದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಬದ್ಧರಾಗಿರುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here