ಲೋಕಸಭಾ ಚುನಾವಣೆಗೆ 14 ವಿಪಕ್ಷಗಳ ಒಗ್ಗಟ್ಟು – ಬಿಜೆಪಿ ಸೋಲಿಸಲು ಸಾಮಾನ್ಯ ಅಜೆಂಡಾಕ್ಕೆ ಸಿದ್ಧತೆ

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವ ಸಂಬಂಧ ಇವತ್ತು ವಿರೋಧ ಪಕ್ಷಗಳ ಮೊದಲ ಸಭೆ ನಡೆದಿದೆ. 

ಮುಂದಿನ ತಿಂಗಳು ಜುಲೈ 12ರಂದು ಕಾಂಗ್ರೆಸ್​ ಆಡಳಿತವಿರುವ ಹಿಮಾಚಲಪ್ರದೇಶ ರಾಜಧಾನಿ ಶಿಮ್ಲಾದಲ್ಲಿ 2ನೇ ಸಭೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ.

ಲೋಕಸಭಾ ಚುನಾವಣೆಗೆ ಸಾಮಾನ್ಯ ಅಜೆಂಡಾವನ್ನು ಮುಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳು ಒಟ್ಟಾಗಿವೆ ಮತ್ತು ನಾವು ಒಟ್ಟಾಗಿ ಬಿಜೆಪಿಯನ್ನು ಸೋಲಿಸಲಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್​ ಒಗ್ಗಟ್ಟಾಗಿದ್ದರಿಂದ ಕರ್ನಾಟಕದಲ್ಲಿ ಗೆದ್ದಿದ್ದೇವೆ. ನಾವು ರಾಜಸ್ಥಾ, ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ತೆಲಂಗಾಣದಲ್ಲಿ ಬಿಜೆಪಿಯನ್ನು ಸೋಲಿಸಲಿದ್ದೇವೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದ ಸಭೆಯಲ್ಲಿ 14 ವಿಪಕ್ಷಗಳ ನಾಯಕರು ಭಾಗವಹಿಸಿದ್ದಾರೆ.

ಕಾಂಗ್ರೆಸ್​: ರಾಹುಲ್​ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ

ಡಿಎಂಕೆ: ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ಮತ್ತು ಟಿ ಆರ್​ ಬಾಲು

ಟಿಎಂಸಿ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್​ ಬ್ಯಾನರ್ಜಿ ಮತ್ತು ಡೆರಿಕ್​ ಓಬ್ರಿಯಾನ್​

ಜೆಡಿಯು: ಮುಖ್ಯಮಂತ್ರಿ ನಿತೀಶ್​ ಕುಮಾರ್​, ಲಲ್ಲನ್​ ಸಿಂಗ್​

ಆರ್​ಜೆಡಿ: ಲಾಲೂ ಪ್ರಸಾದ್​ ಯಾದವ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿಯಾದವ್​

ಸಿಪಿಎಂ: ಸೀತಾರಾಂ ಯೆಚೂರಿ

ಸಿಪಿಐ: ಡಿ ರಾಜಾ

ಎನ್​ಸಿಪಿ: ಶರದ್​ಪವಾರ್​, ಸುಪ್ರಿಯಾ ಸುಳೆ, ಪ್ರಫುಲ್​ ಪಟೇಲ್​

ಶಿವಸೇನಾ: ಉದ್ಧವ್​ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್​ ರಾವತ್​

ಸಮಾಜವಾದಿ ಪಕ್ಷ: ಅಖಿಲೇಶ್​ ಸಿಂಗ್​ ಯಾದವ್​

ನ್ಯಾಷನಲ್​ ಕಾನ್ಫೆರೆನ್ಸ್​: ಓಮರ್​ ಅಬ್ದುಲ್ಲಾ

ಪಿಡಿಪಿ: ಮೆಹಬೂಬಾ ಮುಫ್ತಿ

ಸಿಪಿಐಎಂ ಎಲ್​: ದೀಪಾಂಕರ್​ ಭಟ್ಟಾಚಾರ್ಯ

ಜೆಎಂಎಂ: ಹೇಮಂತ್​ ಸೊರೇನ್​

ಆಮ್​ ಆದ್ಮಿ ಪಕ್ಷ: ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​