ಶಾಸಕ ಸಂತೋಷ್ ಬಂಗಾರ್ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರ ಬಹುಮತ ಸಾಬೀತಿಗೆ ಹಿಂದಿನ ದಿನದ ರಾತ್ರಿ ಸಿಎಂ ಬಣಕ್ಕೆ ಸೇರಿಕೊಂಡಿದ್ದಾರೆ. ಈ ಮೊದಲು ಒಂದು ವಾರದ ಹಿಂದೆ ಈ ಶಾಸಕ ಉದ್ದವ್ ಠಾಕ್ರೆಯವರನ್ನು ಬೆಂಬಲಿಸುವಂತೆ ಬಹಿರಂಗ ಸಮಾವೇಶದಲ್ಲಿ ಕಣ್ಣೀರು ಹಾಕಿದ್ದರು.
ಕಳೆದ ರಾತ್ರಿ ಶಾಸಕ ಸಂತೋಷ್ ಬಂಗಾರ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಶಾಸಕರೊಂದಿಗೆ ಉಳಿದುಕೊಂಡಿದ್ದ ಮುಂಬೈನ ಹೋಟೆಲ್ ಗೆ ಹೋಗಿ ರೆಬೆಲ್ ಶಾಸಕರ ತಂಡಕ್ಕೆ ಸೇರಿಕೊಂಡಿದ್ದರು.
ಇಂದು ನಡೆದ ಬಹುಮತ ಸಾಬೀತಿನಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸುಲಭವಾಗಿ ಬಹುಮತ ಗಳಿಸಿದರು.
ಜೂನ್ 24 ರಂದು ಏಕನಾಥ್ ಶಿಂಧೆ ನೇತೃತ್ವದಲ್ಲಿ ರೆಬೆಲ್ ಶಾಸಕರು ಅಸ್ಸಾಂಗೆ ಪ್ರಯಾಣಿಸಿದಾಗ ಶಾಸಕ ಸಂತೋಷ್ ಬಂಗಾರ್ ತಮ್ಮ ಕ್ಷೇತ್ರದ ಸಮಾವೇಶದಲ್ಲಿ ಮಾತನಾಡಿ ಉದ್ದವ್ ಠಾಕ್ರೆಯವರನ್ನು ಬೆಂಬಲಿಸುವಂತೆ ಜನರಲ್ಲಿ ಕೇಳಿಕೊಂಡು ಕಣ್ಣೀರು ಹಾಕಿದ್ದರು.
आज मतदारसंघांमध्ये परत आल्यानंतर उपस्थित शिवसैनिकांना संबोधित करताना अश्रू अनावर झाले….शेवटच्या श्वासापर्यंत आदरणीय शिवसेना पक्षप्रमुख #उद्धव_ठाकरे साहेबा सोबत. @ShivSena @AUThackeray pic.twitter.com/loMHpUI4cL
— आमदार संतोष बांगर (@santoshbangar_) June 24, 2022
ಸಮಾವೇಶದಲ್ಲಿ ಮಾತನಾಡುತ್ತಾ, ಉದ್ದವ್ ಠಾಕ್ರೆಯವರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದ ಶಾಸಕ ಸಂತೋಷ್ ಬಂಗಾರ್ ಇದೀಗ, ಏಕನಾಥ್ ಶಿಂಧೆಯವರ ಬಣ ಸೇರಿದ್ದಾರೆ.
ಇಂದು ನಡೆದ ಮತದಾನದಲ್ಲಿ ವಸಂತ್ ಬಂಗಾರ್ ಶಿವಸೇನೆ-ಬಿಜೆಪಿ ಮೈತ್ರಿಕೂಟಕ್ಕೆ ಮತ ಚಲಾಯಿಸಿದರು. ಇದೇ ವೇಳೆ ಮತ್ತೊಬ್ಬ ಶಾಸಕ ಶ್ಯಾಮಸುಂದರ್ ಶಿಂಧೆಯವರೂ ಅಡ್ಡ ಮತದಾನ ಮಾಡಿದ್ದಾರೆ. ಇಂದು ನಡೆದ ಮಹುಮತ ಸಾಬೀತಿನಲ್ಲಿ ಏಕನಾಥ್ ಶಿಂಧೆ 286 ರಲ್ಲಿ 164 ಮತ ಪಡೆಯುವ ಮೂಲಕ ಬಹುಮತ ಸಾಬೀತುಪಡಿಸಿದರು.