ADVERTISEMENT
ಬಿಗ್ಬಾಸ್ ವಿಜೇತ ಪ್ರಥಮ್ ಅವರು ಮದುವೆ ಆಗುತ್ತಿದ್ದಾರೆ.
ಮಂಡ್ಯ ಮೂಲದ ಭಾನುಶ್ರೀ ಅವರನ್ನು ಮದುವೆ ಆಗಲಿದ್ದಾರೆ.
ಮಂಡ್ಯದಲ್ಲಿ ಪ್ರಥಮ್-ಭಾನುಶ್ರೀ ಅವರ ನಿಶ್ಚಿತಾರ್ಥ ನಡೆಯಿತು.
ಒಂದು ಸುಂದರ ಕ್ಷಣ.ಇವತ್ತು ನನ್ನ engagement ಆಯ್ತು;
ಯಾವ ಆಡಂಬರ,ಸಂಭ್ರಮ,ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ;ನಾನು ತುಂಬಾ ಸರಳವಾಗಿಯೇ ಬದುಕಿದವನು;ಹಾಗೇ ಇರೋಕೆ ಇಷ್ಟ;
ನನ್ನ engagement ಈ ದೇಶದ ದೊಡ್ಡ ಸುದ್ಧಿಯಲ್ಲ..;
ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ…;
ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ; ನನಗೆ ಹಾಗಿರೋಕೆ ಇಷ್ಟ;ಹೀಗೇ ಇದ್ದು ಬಿಡ್ತೀನಿ..ಹರಸುವವರು ಅಲ್ಲಿಂದಲೇ ಹರಸಿ…ಅದೇ ಆಶೀರ್ವಾದ..
ಎಂದು ಪ್ರಥಮ್ ಅವರು ಬರೆದುಕೊಂಡಿದ್ದಾರೆ.
ADVERTISEMENT