ಹುಟ್ಟುಹಬ್ಬದಂದು ನಟ ದರ್ಶನ್​ಗೆ ಒಳ್ಳೆ ಹುಡುಗ ಪ್ರಥಮ್​ 2 ಬುದ್ಧಿಮಾತು..! – 2 ಮಾತು ಕೇಳ್ತಾರಾ ನಟ ದರ್ಶನ್​..?

ಇವತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹುಟ್ಟುಹಬ್ಬ. ದರ್ಶನ್​ ಹುಟ್ಟುಹಬ್ಬದಂದೇ ಅವರಿಗೆ ಬಿಗ್​ಬಾಸ್​​ ಖ್ಯಾತಿ ಒಳ್ಳೆ ಹುಡುಗ ಪ್ರಥಮ್​ ಎರಡು ಬುದ್ಧಿಮಾತು ಹೇಳಿದ್ದಾರೆ.
ದರ್ಶನ್​ ಅವರಿಗೆ ಹೇಳಿರುವ ಆ 2 ಬುದ್ಧಿಮಾತನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ದರ್ಶನ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ.
HBD @dasadarshan sir! 2ಮಾತು ಹೇಳ್ತೀನಿ!ದಯವಿಟ್ಟು ಸ್ವೀಕರಿಸಿ!ಅಂಬರೀಶ್ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡmassಹೀರೋ ನೀವು!
ಭಗವಂತ ಎಲ್ಲಾ ಕೊಟ್ಟಿದ್ದಾನೆ ನಿಮ್ಗೆ,ಎಷ್ಟುfans ಇದಾರೆ ನೋಡಿ?ಇಷ್ಟಿದ್ಮೇಲೆ ಕೂಲಾಗಿರಿ!ಆರಾಮಾಗಿರಿ!
2- ನಿಮ್ಮ ಮಾಧ್ಯಮದ ನಡುವಿನ ಮುನಿಸು ನಿಲ್ಲಲ್ಲಿ!ನೀವು-mediaಒಂದಾಗ್ಲಿ ಅನ್ನೋದೇ ಪ್ರಾಮಾಣಿಕ ಆಸೆ🙏
ಎಂದು ದರ್ಶನ್​ ಅವರಿಗೆ ಪ್ರಥಮ್​ ಬುದ್ಧಿಮಾತು ಹೇಳಿದ್ದಾರೆ.
ಈ ಪೋಸ್ಟ್​​ಗೆ ಅಭಿಮಾನಿಯೊಬ್ಬರು ಕಮೆಂಟ್​ ಹಾಕಿದ್ದಾರೆ.
ಪ್ರತಮ್ ಅಣ್ಣಾ, ದರ್ಶನ್ ಆದ ಮೇಲೆ , ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಮಾಸ್ ಹೀರೊ ಅಂದ್ರೆ ನೀವೇ.
ದರ್ಶನ್ ಗೆ ಎಸ್ಟ್ ಫ್ಯಾನ್ಸ್ ಇದ್ದಾರೋ ಅಷ್ಟು ನಿಮ್ಗೆ ಮುಂದೆ ಆಗ್ತಾರೆ , ಆದ್ರೆ ಬಿಗ್ ಬಾಸ್ ನಲ್ಲಿ ನಿಮ್ಮನ್ನು Pre-Plan ಆಗಿ ಹೊಡೆಸಿದ ಕಲರ್ಸ್ TVಯ ರಾಘವೇಂದ್ರ ಹುಣಸೂರು ಅವ್ರನ್ನ ಮಾತ್ರ ಸುಮ್ಮನೆ ಬಿಡಬೇಡಿ.
ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಅದಕ್ಕೆ ಪ್ರಥಮ್​ ಅವರು ಕೊಟ್ಟ ಉತ್ತರ ಹೇಗಿತ್ತು ಎಂದರೆ:
ಅಪ್ಪ ಸ್ವಾಮಿ.ನಿಮ್ಮ ಕೈಮುಗೀತಿನಿ ಬೆಂಕಿ ಕಚ್ಚಬೇಡ್ರೋ….ಈಗಾಗಲೇ @darshan sir ನನ್ನ ಮೇಲ್ವ್ ಸುಮ್ಮಸುಮ್ಮನೆ ಕೋಪಾಅಡ್ಕೊಂಡಿದ್ದಾರೆ.ಹಿಂಗೆಲ್ಲಾ ನೀವು tweet ಮಾಡಿದ್ರೆ ಪ್ರಥಮ್ ದೊಡ್ಡ ಹೀರೋ ನ ಅಂತ ಇನ್ನೂ ಜಾಸ್ತಿ ಕೋಪ ಮಾಡ್ಕೊಳ್ತಾರೆ‌‌.ನನ್ನ ಪಾಡಿಗೆ ನನ್ನ ಬಿಡ್ರೋ‌..ಯಾಕಪ್ಪ ??🤔🤗😂🙏❤
ಎಂದು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here