ಮನೆಯಲ್ಲಿ ಸಾಕಿದ್ದ ಪಿಟ್ಬುಲ್ ಜಾತಿಯ ನಾಯಿಯ ದಾಳಿಗೆ 82 ವರ್ಷದ ವೃದ್ಧೆಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಲಕ್ನೋದಲ್ಲಿ ಸುಶೀಲ ತ್ರಿಪಾಠಿ ಎಂಬ 82 ವರ್ಷದ ನಿವೃತ್ತ ಶಿಕ್ಷಕಿಯ ಅವರ ಮೇಲೆ ಮನೆಯ ಟೆರಸ್ನಲ್ಲಿ ಪಿಟ್ಬುಲ್ ದಾಳಿ ಮಾಡಿತ್ತು.
ರಕ್ತದೋಕುಳಿಯ ನಡುವೆ ಬಿದ್ದಿದ್ದ ಆಕೆಯನ್ನು ಮನೆಗೆಲಸದವಳು ನೋಡಿ ತಕ್ಷಣವೇ ವೃದ್ಧೆಯ ಮಗನಿಗೆ ಮಾಹಿತಿ ನೀಡಿದರು.
ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಬದುಕುಳಿಯಲಿಲ್ಲ.
ಪಿಟ್ಬುಲ್ ಜಾತಿಯ ನಾಯಿ ಅತ್ಯಂತ ಅಪಾಯಕಾರಿ ನಾಯಿ ಎಂದೇ ಪರಿಗಣಿಸಲಾಗುತ್ತಿದ್ದು, ಮನೆಗಳಲ್ಲಿ ಸಾಕು ನಾಯಿಯಂತೆ ಸಾಕಲು ಅನುಮತಿ ಅಗತ್ಯ. ಮನೆಯಲ್ಲಿ ತರಬೇತುದಾರರಿದರಷ್ಟೇ ಪಿಟ್ಬುಲ್ ನಾಯಿಯನ್ನು ಸಾಕಲು ಅನುಮತಿ ನೀಡಲಾಗುತ್ತದೆ.