ಕೇಂದ್ರ ಸರ್ಕಾರ ಸಹಾಯಧನ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಇವತ್ತಿನಿಂದ ಎಲೆಕ್ಟ್ರಿಕ್ ಸ್ಕೂಟರ್ಗಳ ಖರೀದಿ ದುಬಾರಿ ಆಗಲಿದೆ.
ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳ ಮೇಲಿನ ದರವನ್ನು ಹೆಚ್ಚಳ ಮಾಡಿದೆ.
ಓಲಾ ಎಸ್1 ಮತ್ತು ಎಸ್1 ಪ್ರೋ ಸ್ಕೂಟರ್ಗಳ ಬೆಲೆ 15 ಸಾವಿರ ರೂಪಾಯಿ ಹೆಚ್ಚಳವಾಗಿದೆ.
ಎಸ್1 ಬೆಲೆ 1,14,199 ರೂಪಾಯಿ ಇತ್ತು. ಈಗ ಇದರ ದರ 1,29,999 ರೂಪಾಯಿಗೆ ಹೆಚ್ಚಳವಾಗಿದೆ.
ಎಸ್1ಪ್ರೋ ಇದರ ಬೆಲೆ 1,24,999 ರೂಪಾಯಿ ಇತ್ತು. ಈಗ ಇದರ ಬೆಲೆ 1,39,999 ರೂಪಾಯಿ ಆಗಿದೆ.
FAME ಸಹಾಯಧನ ಕಡಿತದ ಹೊಡೆತ:
FAME ಅಂದ್ರೆ ವೇಗದ ಅಳವಡಿಕೆ ಮತ್ತು ಎಲೆಕ್ಟ್ರಿಕ್ ಉತ್ಪಾದನೆ (Faster Adoption and Manufacturing of Electric) ಸಹಾಯಧನ ಯೋಜನೆಯಡಿ ಕೇಂದ್ರ ಸರ್ಕಾರದ ನೀಡುತ್ತಿದ್ದ ಸಹಾಯಧನದ ಮಿತಿಯನ್ನು ಶೇಕಡಾ 40ರಿಂದ ಶೇಕಡಾ 15ಕ್ಕೆ ಕಡಿತಗೊಳಿಸಿದೆ. ಅಂದರೆ ಶೇಕಡಾ 25ರಷ್ಟು ಸಬ್ಸಿಡಿ ಕಡಿತಗೊಂಡಿದೆ. ಅಂದರೆ ಎಲೆಕ್ಟ್ರಿಕ್ ಸ್ಕೂಟರ್ಗಳ ಉತ್ಪಾದನಾ ವೆಚ್ಚದ ಭಾಗವಾಗಿ ಕಂಪನಿಗಳಿಗೆ ಸರ್ಕಾರ ನೀಡುತ್ತಿದ್ದ ಸಹಾಯಧನ.
2019ರಲ್ಲಿ ಜಾರಿಯಾದ ಈ ಯೋಜನೆಯಡಿಯಲ್ಲಿ ಓಲಾ ಎಸ್1 ಪ್ರೋ ಉತ್ಪಾದನೆ ಮೇಲೆ 59,550 ರೂಪಾಯಿವರೆಗೂ ಕಂಪನಿಗಳಿಗೆ ಉತ್ಪಾದನಾ ಆಧರಿತ ಸಹಾಯಧನ ಸಿಗುತ್ತಿತ್ತು. ಆದರೆ ಈಗ ಆ ಮೊತ್ತ 22,628 ರೂಪಾಯಿಗೆ ಕುಸಿದಿದೆ.
ಸಹಜವಾಗಿಯೇ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿಗಳು ಆ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿವೆ.
ADVERTISEMENT
ADVERTISEMENT