ಒಡಿಶಾ ರೈಲು ದುರಂತ – ಸುಳ್ಳು ಸುದ್ದಿ ಹಬ್ಬಿಸಿದ್ದ BJP ಕಾರ್ಯಕರ್ತನ ಬಂಧನ

ಒಡಿಶಾ ರೈಲು ದುರಂತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದ ಆರೋಪದಡಿಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಕನ್ಯಾಕುಮಾರಿ ಮೂಲದ ಬಿಜೆಪಿ ಕಾರ್ಯಕರ್ತ ಸೆಂಥಿಲ್​ ಕುಮಾರ್​ ರೈಲು ದುರಂತದ ಬಗ್ಗೆ ದ್ವೇಷ ಪೂರಿತ ಸುದ್ದಿಗಳನ್ನು ಹಬ್ಬಿಸಿದ್ದ.
ಈತನ ವಿರುದ್ಧ ನಾಲ್ಕು ಸೆಕ್ಷನ್​​ಗಳ ಅಡಿಯಲ್ಲಿ ತಮಿಳುನಾಡು ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದರು.
ಒಡಿಶಾದಲ್ಲಿ ಸಂಭವಿಸಿದ್ದ ರೈಲು ದುರಂತದಲ್ಲಿ 288 ಮಂದಿ ಸಾವನ್ನಪ್ಪಿದ್ದರು.