ಒಡಿಶಾ ರೈಲು ದುರಂತಕ್ಕೆ ಟಿಎಂಸಿ ಕಾರಣ – ಬಿಜೆಪಿ ಮುಖಂಡ ಸುವೆಂದು ಅಧಿಕಾರಿ

ಒಡಿಶಾ ತ್ರಿವಳಿ ರೈಲು ದುರಂತಕ್ಕೆ ಪಶ್ಚಿಮಬಂಗಾಳ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ರಾಜಕೀಯ ಬಣ್ಣ ನೀಡಿದ್ದಾರೆ.

ರೈಲು ದುರಂತದ ಹಿಂದೆ ಟಿಎಂಸಿ ಪಕ್ಷ ಕೈವಾಡವಿದೆ ಎಂದು ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ.

ಇಬ್ಬರು ರೈಲ್ವೇ ಅಧಿಕಾರಿಗಳು ಫೋನ್ ನಲ್ಲಿ ಮಾತನಾಡುವುದನ್ನು ತೃಣಮೂಲ ಕಾಂಗ್ರೆಸ್​ ಪಕ್ಷದ ನಾಯಕರು ಟ್ಯಾಪ್ ಮಾಡಿದ್ದಾರೆ. ಅದಕ್ಕಾಗಿಯೇ ಟಿಎಂಸಿ ಸಿಬಿಐ ತನಿಖೆ ವಿರೋಧಿಸುತ್ತಿದೆ..

ಅವರು ತಪ್ಪು ಮಾಡಿಲ್ಲ ಎಂದ ಮೇಲೆ ಸಿಬಿಐ ತನಿಖೆಯನ್ನು ಏಕೆ ವಿರೋಧಿಸಬೇಕು ಎಂದು ಸುವೆಂದು ಅಧಿಕಾರಿ ಪ್ರಶ್ನೆ ಮಾಡಿದ್ದಾರೆ.

ಟಿಎಂಸಿಯವರು ಕರ್ತವ್ಯದಲ್ಲಿದ್ದ ಇಬ್ಬರು ರೈಲ್ವೇ ಅಧಿಕಾರಿಗಳ ಫೋನ್​ಗಳನ್ನು ಟ್ಯಾಪ್ ಮಾಡಿದ್ದು ಏಕೆ ಎಂದು ಸುವೆಂದು ಅಧಿಕಾರಿ ಕೇಳಿದ್ದಾರೆ.

ಈ ಆಯಾಮದಲ್ಲಿಯೂ ಸಿಬಿಐ ತನಿಖೆ ನಡೆಸಬೇಕು.. ಇಲ್ಲವಾದಲ್ಲಿ ನಾವು ಕೋರ್ಟ್​ ಮೆಟ್ಟಿಲು ಏರುತ್ತೇವೆ ಎಂದು ಸುವೆಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ರೈಲು ದುರಂತದ ಹಿಂದೆ ಸಂಚು ಎಂಬ ಪೊಳ್ಳು – ಸಿಬಿಐ ಮಾಜಿ ನಿರ್ದೇಶಕ ಆಕ್ರೋಶ