ರಾಹುಲ್ ಗಾಂಧಿಯವರು ನೇಪಾಳದ ನೈಟ್ಕ್ಲಬ್ ಒಂದರಲ್ಲಿ ವೀಡಿಯೋವನ್ನು ಹಂಚಿಕೊಂಡು ಬಿಜೆಪಿ ನಾಯಕರು ಹಾಗೂ ಬಿಜೆಪಿ ಕಾರ್ಯಕರ್ತರು ಹಣಕವಾಡಿದ್ದರು. ಇದೀಗ, ಕಾಂಗ್ರೆಸ್ ಬಿಜೆಪಿ ನಾಯಕರ ಈ ಮಾತಿಗೆ ಟಾಂಗ್ ನೀಡಿದ್ದು, ರಾಹುಲ್ ಗಾಂಧಿಯವರೇನು ಮೋದಿಯವರ ರೀತಿಯಲ್ಲಿ ಏಕಾಏಕಿ ಪಾಕಿಸ್ತಾನಕ್ಕೆ ಹೋಗಿ ಕೇಕ್ ಕಟ್ ಮಾಡಿಲ್ಲ ಎಂದು ಮರು ಕುಹಕವಾಡಿದೆ.
ರಾಹುಲ್ ಗಾಂಧಿಯವರು ನೇಪಾಳದ ಕಾಠ್ಮಂಡುವಿನಲ್ಲಿ ಗೆಳೆಯರೊಬ್ಬರ ಮದುವೆಯಲ್ಲಿ ಹಾಜರಾಗಿದ್ದರು. ಈ ವೇಳೆ ನೈಟ್ಕ್ಲಬ್ನಲ್ಲಿ ಹಲವು ಜನ ರಾಜಕಾರಣಿಗಳು ಹಾಗೂ ಇತರೆ ಗೆಳೆಯರೊಂದಿಗೆ ಭಾಗವಹಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಬಿಜೆಪಿಗೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್, ಸ್ನೇಹಿತ ರಾಷ್ಟ್ರಗಳಲ್ಲಿ ಗೆಳೆಯರ ಮದುವೆಯಲ್ಲಿ ಹಾಜರಾಗುವುದು ಕ್ರೈಮ್ ಅಲ್ಲ. ಇದು ನರೇಂದ್ರ ಮೋದಿಯವರು 2015 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ಕೊಟ್ಟದ್ದಕ್ಕಿಂತಲೂ ದೊಡ್ಡದೇನಲ್ಲ ಎಂದು ಹೇಳಿದೆ.
ರಾಹುಲ್ ಗಾಂಧಿಯವರು, ಪ್ರಧಾನಿ ನರೇಂದ್ರ ಮೋದಿಯವರ ರೀತಿಯಲ್ಲಿ ಯಾವುದೇ ಆಹ್ವಾನವಿಲ್ಲದೇ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಅವರ ಮಗಳ ಮದುವೆಯಲ್ಲಿ ಭಾಗವಹಿಸಿ ಕೇಕ್ ಕಟ್ ಮಾಡಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರು ನೇಪಾಳದ ಪತ್ರಕರ್ತ ಗೆಳೆಯರೊಬ್ಬರ ಮದುವೆಯ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಇದು ಸಂಸ್ಕೃತಿಯೇ ಹೊರತು ಅಪರಾಧವಲ್ಲ. ಇದನ್ನ ನೋಡಿದ್ದರೆ ಮುಂದಿನ ದಿನಗಳಲ್ಲಿ ಪ್ರಧಾನಿಯವರು ಗೆಳಯರ ಹಾಗೂ ಬಂಧುಗಳ ಮದುವೆಗೆ ಹೋಗುವುದನ್ನು ಅಪರಾಧ ಎಂದು ನಿರ್ಧರಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.
Rahul Gandhi was at a nightclub when Mumbai was under seize. He is at a nightclub at a time when his party is exploding. He is consistent.
Interestingly, soon after the Congress refused to outsource their presidency, hit jobs have begun on their Prime Ministerial candidate… pic.twitter.com/dW9t07YkzC
— Amit Malviya (मोदी का परिवार) (@amitmalviya) May 3, 2022
ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ರಾಹುಲ್ ಗಾಂಧಿಯವರು ನೈಟ್ಕ್ಲಬ್ನಲ್ಲಿರುವ ವೀಡಿಯೋ ಟ್ವೀಟ್ ಮಾಡಿದ್ದರು. ಇವರ ಟ್ವೀಟ್ಗೆ ರಣದೀಪ್ ಸಿಂಗ್ ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೊದಲು, ರಾಹುಲ್ಗಾಂಧಿಯವರು ಮಂಗಳವಾರ ಇತರೆ 3 ಜನರೊಂದಿಗೆ ಕಾಠ್ಮಂಡುಗೆ ಆಗಮಿಸಿದ್ದಾರೆ. ಅವರ ಗೆಳೆಯರ ಮದುವೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ನೇಪಾಳದ ಪತ್ರಿಕೆಯೊಂದು ವರದಿ ಮಾಡಿತ್ತು.