ಆಯಸ್ಸೇ ಕಡಿಮೆ ಆಗ್ತಿದೆ, ಮರಣದಂಡನೆ ಯಾಕೆ..? – ವಿಚಿತ್ರ ವಾದ ಮಾಡಿದ್ಯಾರು..?

ದೆಹಲಿಯಲ್ಲಿ ಘಟಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದಲ್ಲಿ ಮರಣದಂಡನೆ ಒಳಗಾಗಿರುವ ಅಪರಾಧಿ ಅಕ್ಷಯ್‌ ಕುಮಾರ್‌ ಸಿಂಗ್‌ ಸುಪ್ರೀಂಕೋರ್ಟ್ ನಲ್ಲಿ ವಿಚಿತ್ರ ವಾದವೊಂದನ್ನು ಮುಂದಿಟ್ಟಿದ್ದಾನೆ. ಈ ವಾದದ ಮೂಲಕ ನಮಗೆ ಏಕೆ ಮರಣದಂಡನೆ ವಿಧಿಸಬೇಕು ಎನ್ನುವ ಪ್ರಶ್ನೆ ಎತ್ತಿದ್ದಾನೆ. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಕಾರಣವನ್ನೂ ಕೊಟ್ಟು ಗಲ್ಲು ಶಿಕ್ಷೆ ರದ್ದುಗೊಳಿಸುವಂತೆ ಮನವಿ ಮಾಡಿದ್ದಾನೆ.

ಮರಣ ದಂಡನೆ ಯಾಕೆ ಬೇಕು..? ಆಯುಸ್ಸೇ ಕಮ್ಮಿ ಆಗುತ್ತಿದೆ. ನಮ್ಮ ವೇದ, ಪುರಾಣ, ಉಪನಿಷತ್ತುಗಳಲ್ಲಿ ಹೇಳಿರುವ ಪ್ರಕಾರ ಸತ್ಯಯುಗದಲ್ಲಿ ಜನ ಸಾವಿರಾರು ವರ್ಷ ಬದುಕುತ್ತಿದ್ದರು. ದ್ವಾಪರ ಯುಗದಲ್ಲಿ ನೂರಾರು ವರ್ಷ ಬದುಕುತ್ತಿದ್ದರು. ಆದರೆ ಇದು ಕಲಿಯುಗದಲ್ಲಿ ಮನುಷ್ಯರ ಆಯಸ್ಸು ಕಮ್ಮಿ ಆಗಿದೆ. ಈಗ ಅದು ೫೦-೬೦ ವರ್ಷಕ್ಕೆ ಬಂದು ನಿಂತಿದೆ. ೧೦೦ ವರ್ಷದ ವ್ಯಕ್ತಿ ಇದ್ದಾರೆ ಎಂದು ಕೇಳುವುದೇ ಅಪರೂಪ ಆಗಿಬಿಟ್ಟಿದೆ.

ಕೆಲವೇ ಕೆಲವು ವ್ಯಕ್ತಿಗಳು ೮೦-೯೦ ವರ್ಷ ಬದುಕಬಹುದು. ಮನುಷ್ಯನ ವಿಷಮ ಸ್ಥಿತಿಗಳಲ್ಲಿ ಜೀವನ ನಡೆಸುತ್ತಿದ್ದು ಆತ ಶವಕ್ಕಿಂತ ಹೆಚ್ಚೇನೂ ಅಲ್ಲ.

ಭಯೋತ್ಪಾದನೆ ಅಥವಾ ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಸರ್ಕಾರಗಳು ಕ್ರಮಕೈಗೊಂಡಿವೆ ಎಂಬುದನ್ನು ಸಾಬೀತು ಮಾಡುವ ಸಲುವಾಗಿಯಷ್ಟೇ ಮರಣದಂಡನೆಯನ್ನು ವಿಧಿಸುವುದು ಸರಿಯಲ್ಲ. ಅದರ ಬದಲು ರಚನಾತ್ಮಕ ಬದಲಾವಣೆಯತ್ತ ಕೆಲಸ ಮಾಡಬೇಕು. ಮರಣದಂಡನೆಯಿಂದ ಕ್ರಿಮಿನಲ್‌ ಸಾಯಬಹುದೇ ಹೊರತು ಅಪರಾಧ ಅಲ್ಲ. ಮರಣದಂಡನೆ ದ್ವೇಷ ಸಾಧನೆಯಷ್ಟೇ

೨೦೧೨ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಕಾಂಡದ ತಪ್ಪಿತಸ್ಥ ೩೧ ವರ್ಷದ  ಅಕ್ಷಯ್‌ ಕುಮಾರ್‌ ಸಿಂಗ್‌ ಸುಪ್ರೀಂಕೋರ್ಟ್ನಲ್ಲಿ ವಾದಿಸಿದ್ದಾನೆ.

ನಿರ್ಭಯಾ ಅತ್ಯಾಕಾಂಡದ ಆರು ಮಂದಿ ಅಪರಾಧಿಗಳಲ್ಲಿ ಒಬ್ಬಾತ ತಿಹಾರ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಅಪ್ರಾಪ್ತ ವಯಸ್ಸಿನ ಅಪರಾಧಿಗೆ ರಿಮ್ಯಾಂಡ್‌ ಹೋಂನಲ್ಲಿದ್ದಾರೆ. ಉಳಿದ ನಾಲ್ವರು ತಿಹಾರ್‌ ಜೈಲಿನಲ್ಲಿದ್ದಾರೆ. ಈ ನಾಲ್ವರಿಗೆ ಕೆಳಹಂತದ ನ್ಯಾಯಾಲಯ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ದೆಹಲಿ ಹೈಕೋರ್ಟ್, ಬಳಿಕ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಸುಪ್ರೀಂಕೋರ್ಟ್ನಲ್ಲಿ ನಾಲ್ವರಲ್ಲಿ ಮೂವರು ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನೂ ಸುಪ್ರೀಂಕೋರ್ಟ್ ವಜಾ ಮಾಡಿತ್ತು.

LEAVE A REPLY

Please enter your comment!
Please enter your name here