ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡುವ ಆದೇಶವನ್ನು ನೈಸ್ ಸಂಸ್ಥೆ ವಾಪಸ್ ಪಡೆದಿದೆ.
ಜುಲೈ 1 ರಿಂದ ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರಿಗಿನ ನೈಸ್ ಟೋಲ್ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆಯ ಟೋಲ್ ಗೆ ಅನುಗುಣವಾಗಿ ಟೋಲ್ ಶುಲ್ಕ ಹೆಚ್ಚಳ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು.
ಆದರೆ, ಇದೀಗ ತಾಂತ್ರಿಕ ಸಮಸ್ಯೆ ಕಾರಣದಿಂದ ಶುಲ್ಕ ಏರಿಕೆಯನ್ನ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಈ ಮೂಲಕ ಹೊಸ ದರ ಪಟ್ಟಿಯನ್ನು ನೈಸ್ ಸಂಸ್ಥೆ ತಾತ್ಕಾಲಿಕವಾಗಿ ತಡೆಹಿಡಿದಿದ್ದು, ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಮುಂದಿನ ವಾರದಲ್ಲಿ ಮತ್ತೆ ಏರಿಕೆ ಸಾಧ್ಯತೆ ಇದೆ.
ಪ್ರಸ್ತುತ ಇರುವ ಟೋಲ್ ದರ:
ಲಿಂಕ್ ರಸ್ತೆ: ದ್ವಿಚಕ್ರ: 18, ಕಾರು: 50, ಬಸ್: 130, ಟ್ರಕ್: 90, ಎಲ್ಸಿವಿ: 50, ಎಂಎವಿ: 105 ರೂ
ಹೊಸೂರು ಯಿಂದ ಬನ್ನೇರುಘಟ್ಟ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 125, ಟ್ರಕ್: 85, ಎಲ್ಸಿವಿ: 45, ಎಂಎವಿ: 90 ರೂ.
ಮೈಸೂರು ರಸ್ತೆ ಯಿಂದ ಮಾಗಡಿ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 135, ಟ್ರಕ್: 90, ಎಲ್ಸಿವಿ: 55, ಎಂಎವಿ: 95 ರೂ.
ಬನ್ನೇರುಘಟ್ಟ ಯಿಂದ ಕನಕಪುರ ರಸ್ತೆ: ದ್ವಿಚಕ್ರ: 12, ಕಾರು: 35, ಬಸ್: 100, ಟ್ರಕ್: 65, ಎಲ್ಸಿವಿ: 35, ಎಂಎವಿ: 70 ರೂ.
ಕ್ಲವರ್ ಲೀಫ್ ಯಿಂದ ಮೈಸೂರು ರಸ್ತೆ: ದ್ವಿಚಕ್ರ: 8, ಕಾರು: 20, ಬಸ್: 55, ಟ್ರಕ್: 35, ಎಲ್ಸಿವಿ: 25, ಎಂಎವಿ: 40 ರೂ.
ಮಾಗಡಿ ರಸ್ತೆ ಯಿಂದ ತುಮಕೂರು ರಸ್ತೆ: ದ್ವಿಚಕ್ರ: 12, ಕಾರು: 40, ಬಸ್: 105, ಟ್ರಕ್: 70, ಎಲ್ಸಿವಿ: 40, ಎಂಎವಿ: 75 ರೂ.
ಕನಕಪುರ ರಸ್ತೆ ಯಿಂದ ಕ್ಲೋವರ್ ಲೀಫ್: ದ್ವಿಚಕ್ರ: 8, ಕಾರು: 25, ಬಸ್: 65, ಟ್ರಕ್: 40, ಎಲ್ಸಿವಿ: 25, ಎಂಎವಿ: 40 ರೂ.