ನಮ್ಮ ಹೈಕಮಾಂಡ್ ಯಡಿಯೂರಪ್ಪರವರೇ: ಸಚಿವ ನಾರಾಯಣ ಗೌಡ

ಬೆಂಗಳೂರು: ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಯಾವ ತರಹದ ಅಡಚಣೆಯೂ ಇಲ್ಲ ಯಾವುದೇ ತೊಂದರೆಯೂ ಇಲ್ಲ ಎಂದು ಸಚಿವ ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.

ವಿಧಾನಸೌದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಿದ್ದುಕೊಂಡೇ ಪಕ್ಷದ ಕೆಲಸ ಮಾಡಬಹುದು. ನಮ್ಮ ಹೈಕಮಾಂಡ್ ಯಡಿಯೂರಪ್ಪರವರೇ. ಅವರೇ ಸಿಎಂ ಆಗಿ ಮುಂದುವರಿಯಬೇಕೆಂದು ನಮ್ಮಆಸೆ. ಎಲ್ಲವೂ ಒಳ್ಳೆಯದಾಗಲಿದೆ ಎನ್ನುವ ವಿಶ್ವಾಸವಿದೆ ಎಂದರು.

ದೆಹಲಿಗೆ ಹೋಗುವ ಅಗತ್ಯ ಬಿದ್ದರೆ ಖಂಡಿತ ಹೋಗುತ್ತೇವೆ. ಆದರೆ ಸಿಎಂಗೆ ಹೇಳಿಯೇ ಹೋಗುತ್ತೇವೆ. ಸಿಎಂ‌ ಬದಲಾವಣೆಯಾದರೆ ನಮ್ಮ ಸಚಿವ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

LEAVE A REPLY

Please enter your comment!
Please enter your name here