ಗೋವಾದಲ್ಲಿ ವರುಣನ ಆರ್ಭಟ: 7 ರೈಲು ಸಂಚಾರ ಬಂದ್

ಪಣಜಿ: ಭಾರಿ ಮಳೆ ಪರಿಣಾಮ ಸೋಮವಾರ ಕೊಂಕಣ ರೈಲ್ವೆ ಸಂಚಾರಕ್ಕೆ ಅಡ್ಡಿಯಾಗಿದೆ.

ಕಳೆದ ಕೆಲ ದಿನಗಳಿಂದ ಗೋವಾ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಗೋವಾ ಕರ್ಮಳಿ ಮತ್ತು ಥಿವಿಮ್ ನಡುವಿನ ಸುರಂಗದಲ್ಲಿ ನೀರು ಮತ್ತು ಕೆಸರು ತುಂಬಿದೆ.

ಪರಿಣಾಮ ಕೊಂಕಣ ರೈಲ್ವೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಈ ಮಾರ್ಗದಲ್ಲಿ ಓಡಾಟ ನಡಟೆಸುವ 7 ರೈಲುಗಳ ಸಂಚಾರವನ್ನು ತುರ್ತಾಗಿ ಬಂದ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋವಾದ ಪೆಡ್ನೆಯ ರೈಲ್ವೆ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ರೈಲ್ವೆ ಪ್ರಯಾಣಿಕರನ್ನು ಬಸ್ ಮೂಲಕ ಮಡಗಾಂವ ರೈಲ್ವೆ ನಿಲ್ದಾಣಕ್ಕೆ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ. ರೈಲ್ವೆ ಸುರಂಗದಲ್ಲಿ ತುಂಬಿರುವ ಕೆಸರು ಮತ್ತು ತೆಗೆದು ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here