‘ಬಿಗ್ ಬಾಸ್ 13’ ವಿನ್ನರ್ ಸಿದ್ದಾರ್ಥ್ ಶುಕ್ಲಾ ಇನ್ನಿಲ್ಲ

ಹಿಂದಿ ಕಿರುತೆರೆಯ ಜನಪ್ರಿಯ ನಟ ಸಿದ್ಧಾರ್ಥ್​ ಶುಕ್ಲಾ ಅವರು  ಹೃದಯಾಘಾತದಿಂದ ಇಂದು ಮೃತರಾಗಿದ್ದಾರೆ. ಬಿಗ್​ ಬಾಸ್​ ಹಿಂದಿ 13ನೇ ಸೀಸನ್​ ವಿನ್ನರ್​ ಆಗಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

‘ಬಾಲಿಕಾ ವಧು’ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅವರು ಜನಪ್ರಿಯತೆ ಗಳಿಸಿದ್ದರು. ಬುಧವಾರ ರಾತ್ರಿ ಮಲಗುವಾಗ ಅವರು ಯಾವುದೋ ಔಷಧಿ ಸೇವಿಸಿದ್ದರು.

ಆದರೆ ಗುರುವಾರ ಬೆಳಗ್ಗೆಯೊಳಗೆ ಅವರು ನಿಧನರಾಗಿದ್ದಾರೆ ಎಂದು ಮುಂಬೈನ ಕೂಪರ್​ ಆಸ್ಪತ್ರೆ ಮೂಲಗಳು ತಿಳಿಸಿವೆ. ಸಿದ್ಧಾರ್ಥ್​ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು, ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ.

 

 

 

LEAVE A REPLY

Please enter your comment!
Please enter your name here