ADVERTISEMENT
ADVERTISEMENT
ಸಂಸತ್ತಿನ ಹೊಸ ಕಟ್ಟಡ ಲೋಕಾರ್ಪಣೆಯಾಗಿದೆ. ಈ ಮೂಲಕ ಇನ್ನು 10 ವರ್ಷದೊಳಗೆ ದೇಶದ ರಾಜಕೀಯ ಚಿತ್ರಣ ಬದಲಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ.
47 ವರ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಆಗಿಲ್ಲ. 1976ರಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 1971ರ ಜನಗಣತಿ ಆಧರಿಸಿ 543ಕ್ಕೆ ಹೆಚ್ಚಳ ಮಾಡಲಾಗಿತ್ತು.
ಹೊಸದಾಗಿ ಲೋಕಾರ್ಪಣೆಗೊಂಡಿರುವ ಸಂಸತ್ತಿನ ಕಟ್ಟಡದಲ್ಲಿ ಲೋಕಸಭೆಯಲ್ಲಿ ಆಸನ ಸಾಮರ್ಥ್ಯವನ್ನು 888ಕ್ಕೆ ಮತ್ತು ರಾಜ್ಯಸಭೆಯಲ್ಲಿ 348ಕ್ಕೆ ಹೆಚ್ಚಿಸಲಾಗಿದೆ.
2002ರಲ್ಲಿ ಮಾಡಲಾದ ಸಂವಿಧಾನ ತಿದ್ದುಪಡಿ ಪ್ರಕಾರ 2026ರವರೆಗೆ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಕ್ಕಾಗಲ್ಲ. 2026ರ ಬಳಿಕದ ಜನಗಣತಿ ಆಧರಿಸಿ ಕ್ಷೇತ್ರಗಳ ಹೆಚ್ಚಳಕ್ಕೆ ಅವಕಾಶ ಇದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕ್ರಮದಲ್ಲಿ ಯಶಸ್ವಿಯಾಗಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸದರ ಸಂಖ್ಯೆ ಏರಿಳಿತದಿಂದ ಅನ್ಯಾಯ ಆಗಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಜನಸಂಖ್ಯಾ ಬೆಳವಣಿಗೆ ದರ ದೇಶಾದ್ಯಂತ ಏಕರೂಪಕ್ಕೆ ಬರುವವರೆಗೆ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯ ಮುಂದೂಡಿಕೆಗೆ ತೀರ್ಮಾನಿಸಲಾಗಿತ್ತು.
ಅಂದರೆ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಯುವ ಹಿನ್ನೆಲೆಯಲ್ಲಿ 2031ರ ಜನಗಣತಿ ಆಧರಿಸಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆ ಆಗಲಿದೆ.
ಪ್ರತಿ 10 ಲಕ್ಷ ಮತದಾರರಿಗೆ 1 ಲೋಕಸಭಾ ಕ್ಷೇತ್ರ ಇರಬೇಕು ಎನ್ನುವುದು ಅಭಿಪ್ರಾಯ. 2014ರಲ್ಲಿ ಭಾರತದಲ್ಲಿದ್ದ ಮತದಾರರ ಸಂಖ್ಯೆಯೇ 84 ಕೋಟಿ ದಾಟಿತ್ತು. ಅಂದರೆ ಜನಸಂಖ್ಯೆ ಆಧರಿಸಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 840 ದಾಟಬೇಕಿತ್ತು. ಆದರೆ 2026ರ ಬಳಿಕವಷ್ಟೇ ಕ್ಷೇತ್ರಗಳ ಹೆಚ್ಚಳವಾಗಲಿದೆ ಎಂದು ಇದೇ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ್ದರು.
ಆದರೆ ಇನ್ನು 10 ವರ್ಷಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗುವುದಂತು ನಿಶ್ಚಿತ. ಈಗಿರುವ ಮತದಾರರ ಸಂಖ್ಯೆ ಮತ್ತು ಸರಾಸರಿ 10 ಲಕ್ಷ ಮತದಾರರಿಗೆ ಒಬ್ಬ ಸಂಸದ ಎಂಬ ಲೆಕ್ಕಾಚಾರದ ಜೊತೆಗೆ ಹೊಸ ಸಂಸತ್ ಭವನದಲ್ಲಿ ಲೋಕಸಭೆಯ ಆಸನಗಳ ಸಂಖ್ಯೆಯನ್ನು 888ಕ್ಕೆ ಹೆಚ್ಚಳ ಮಾಡಿರುವುದನ್ನು ಆಧರಿಸಿ ಚುನಾವಣಾ ವಿಶ್ಲೇಷಕರು, ಅಂಕಿಅಂಶಗಳ ತಜ್ಱರು ಲೆಕ್ಕಾಚಾರವೊಂದನ್ನು ಮುಂದಿಟ್ಟಿದ್ದಾರೆ.
888 ಲೋಕಸಭಾ ಕ್ಷೇತ್ರಗಳಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಗೆ ಬೇಕಾಗಿರುವುದು 445 ಸಂಸದರ ಬೆಂಬಲ.
ಈ ಲೆಕ್ಕಾಚಾರದಲ್ಲಿ ಆಯಾಯ ರಾಜ್ಯದ ಜನಸಂಖ್ಯೆ ಆಧರಿಸಿ ಆ ರಾಜ್ಯದ ಲೋಕಸಭಾ ಸೀಟುಗಳ ಸಂಖ್ಯೆ ಎಷ್ಟು ಹೆಚ್ಚಳ ಆಗಬಹುದು ಎಂಬ ಅಂದಾಜು ಹಾಕಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳು:
ರಾಜ್ಯ |
ಈಗಿರುವ ಸೀಟು |
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ |
ಎಷ್ಟು ಹೆಚ್ಚಳ..? |
ಶೇಕಡಾ ಹೆಚ್ಚಳ |
ಕರ್ನಾಟಕ |
28 |
45 |
17 |
60 |
ಆಂಧ್ರಪ್ರದೇಶ |
25 |
37 |
12 |
48 |
ತೆಲಂಗಾಣ |
17 |
25 |
8 |
47 |
ಕೇರಳ |
20 |
24 |
4 |
20 |
ತಮಿಳುನಾಡು |
39 |
53 |
14 |
36 |
ಒಟ್ಟು ಸೀಟು |
129 |
184 |
55 |
42.6 |
ಉತ್ತರ ಭಾರತದ ರಾಜ್ಯಗಳು:
ರಾಜ್ಯ |
ಈಗಿರುವ ಸೀಟು |
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ |
ಎಷ್ಟು ಹೆಚ್ಚಳ..? |
ಶೇಕಡಾ ಹೆಚ್ಚಳ |
ಉತ್ತರ ಪ್ರದೇಶ |
80 |
147 |
67 |
84 |
ರಾಜಸ್ಥಾನ |
25 |
50 |
25 |
100 |
ಮಧ್ಯಪ್ರದೇಶ |
29 |
53 |
24 |
83 |
ಬಿಹಾರ |
40 |
76 |
36 |
90 |
ಜಾರ್ಖಂಡ್ |
14 |
24 |
10 |
71 |
ಹರಿಯಾಣ |
10 |
18 |
8 |
80 |
ಛತ್ತೀಸ್ಗಢ |
11 |
18 |
7 |
64 |
ದಿಲ್ಲಿ |
7 |
12 |
5 |
42 |
ಜಮ್ಮು-ಕಾಶ್ಮೀರ |
5 |
9 |
4 |
44 |
ಒಟ್ಟು |
216 |
398 |
182 |
84.2 |
ಇತರೆ ದೊಡ್ಡ ರಾಜ್ಯಗಳು:
ರಾಜ್ಯ |
ಈಗಿರುವ ಸೀಟು |
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ |
ಎಷ್ಟು ಹೆಚ್ಚಳ..? |
ಮಹಾರಾಷ್ಟ್ರ |
48 |
82 |
34 |
ಪಶ್ಚಿಮ ಬಂಗಾಳ |
42 |
76 |
34 |
ಗುಜರಾತ್ |
26 |
44 |
18 |
ಒಡಿಶಾ |
21 |
31 |
10 |
ಪಂಜಾಬ್ |
13 |
20 |
7 |
ಈಶಾನ್ಯ ರಾಜ್ಯಗಳು:
ರಾಜ್ಯ |
ಈಗಿರುವ ಸೀಟು |
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ |
ಎಷ್ಟು ಹೆಚ್ಚಳ..? |
ಶೇಕಡಾ ಹೆಚ್ಚಳ |
ಅಸ್ಸಾಂ |
14 |
23 |
9 |
64 |
ಮಣಿಪುರ |
2 |
2 |
0 |
0 |
ಮಿಜೋರಾಂ |
1 |
1 |
0 |
0 |
ನಾಗಲ್ಯಾಂಡ್ |
1 |
1 |
0 |
0 |
ಸಿಕ್ಕಿಂ |
1 |
1 |
0 |
0 |
ಮೇಘಾಲಯ |
2 |
2 |
0 |
0 |
ತ್ರಿಪುರ |
2 |
3 |
1 |
50 |
ಅರುಣಾಚಲಪ್ರದೇಶ |
2 |
1 |
-1 |
-50 |
ಒಟ್ಟು |
25 |
34 |
9 |
36 |
ಕಡಿಮೆ ಲೋಕಸಭಾ ಕ್ಷೇತ್ರದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು:
ರಾಜ್ಯ |
ಈಗಿರುವ ಸೀಟು |
ಹೆಚ್ಚಳ ಆಗಬಹುದಾದ ಸೀಟುಗಳ ಸಂಖ್ಯೆ |
ಎಷ್ಟು ಹೆಚ್ಚಳ..? |
ಗೋವಾ |
2 |
1 |
-1 |
ಪುದುಚೇರಿ |
1 |
1 |
0 |
ಚಂಡೀಗಢ |
1 |
1 |
0 |
ಅಂಡಮಾನ್ & ನಿಕೋಬಾರ್ |
1 |
1 |
0 |
ದಾದ್ರಾ ನಗರ್ ಹವೇಲಿ |
2 |
1 |
-1 |
ಲಕ್ಷ್ಮದ್ವೀಪ |
1 |
1 |
0 |
ಲಡಾಖ್ |
1 |
1 |
0 |