ಇನ್​ಸ್ಟಾಗ್ರಾಂನಂತೆಯೇ ವಾಟ್ಸ್ಯಾಪ್​ನಲ್ಲಿಯೂ ಹೊಸ ಸೌಲಭ್ಯ

Whatsapp

ವಾಟ್ಸ್ಯಾಪ್ ( Whatsapp ) ತನ್ನ ಬಳಕೆದಾರರಿಗೆ ದಿನೇ ದಿನೇ ನೂತನ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ, ಮತ್ತೊಂದು ನೂತನ ಫೀಚರ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಮೆಟಾ ಒಡೆತನದ ವಾಟ್ಸ್ಯಾಪ್ ( Whatsapp ) ಈ ಬಾರಿ ಇನ್‌ಸ್ಟಾಗ್ರಾಮ್‌ನಲ್ಲಿ ಇರುವಂತೆಯೇ, ಚಾಟ್ ಲಿಸ್ಟ್‌ನಲ್ಲಿಯೇ ಸ್ಟೇಟಸ್ ಅಪ್‌ಡೇಟ್ ನೀಡಲು ಕಾರ್ಯನಿರತವಾಗಿದೆ.

ಇದನ್ನೂ ಓದಿ : ವಾಟ್ಸಾಪ್​ನಲ್ಲಿ ಶೀಘ್ರವೇ ಸಿಗಲಿವೆ ಈ ಸೌಲಭ್ಯಗಳು

ವಾಟ್ಸ್ಯಾಪ್ ಬಿಡುಗಡೆ ಮಾಡಲಿರುವ ಹೊಸ ಅಪ್‌ಡೇಟ್, ಪ್ರಸ್ತುತ ಪರೀಕ್ಷಾರ್ಥ ಬಳಕೆಯಲ್ಲಿದೆ. ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಎಲ್ಲಾ ವ್ಯಾಟ್ಸ್ಯಾಪ್ ಬಳಕೆದಾರರಿಗೆ ದೊರೆಯಲಿದೆ.

ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಇರುವ ಮಾದರಿಯಲ್ಲೇ, ಚಾಟ್ ಜೊತೆಗೆ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದರೆ, ಅವರ ಸ್ಟೇಟಸ್ ಕಾಣಿಸಲಿದೆ.

ಆ್ಯಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ನೂತನ ಅಪ್‌ಡೇಟ್ ದೊರೆಯಲಿದ್ದು, ಈಗಾಗಲೇ ಮೆಟಾ, ಬೀಟಾ ಆವೃತ್ತಿ ಬಿಡುಗಡೆ ಮಾಡಿದೆ.

LEAVE A REPLY

Please enter your comment!
Please enter your name here