ವಿಪಕ್ಷಗಳ ರಾಷ್ಟ್ರೀಯ ಮೈತ್ರಿಕೂಟಕ್ಕೆ ಹೊಸ ಹೆಸರು INDIA – ನಾವು ಪ್ರಧಾನಮಂತ್ರಿ ಹುದ್ದೆ ಹಿಂದೆ ಬಿದ್ದಿಲ್ಲ – ಮಿತ್ರರಿಗೆ ಕಾಂಗ್ರೆಸ್​ ಸ್ಪಷ್ಟನೆ

ಬೆಂಗಗಳೂರಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಹೊಸ ಮೈತ್ರಿ ಕೂಟಕ್ಕೆ ಹೊಸ ಹೆಸರು ಇಡಲಾಗಿದೆ. ಹೊಸ ಮೈತ್ರಿಕೂಟದ ಹೊಸ ಹೆಸರು INDIA ಅಂದರೆ ಭಾರತೀಯ ರಾಷ್ಟ್ರೀಯ ಪ್ರಜಾಸತಾತ್ಮಕ ಒಳಗೊಳ್ಳುವ ಮೈತ್ರಿಕೂಟ. (Indian National Democratic Inclusive Alliance).

ಮೈತ್ರಿಕೂಟಕ್ಕೆ INDIA ಎಂಬ ಹೆಸರನ್ನು ಇಡುವಂತೆ ಸಭೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಸಲಹೆ ನೀಡಿದರು.

ವಿರೋಧ ಪಕ್ಷಗಳ ಸಭೆಯಲ್ಲಿ ಮಾತಾಡಿದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ಕಾಂಗ್ರೆಸ್​ ಅಧಿಕಾರ ಅಥವಾ ಪ್ರಧಾನಮಂತ್ರಿ ಹುದ್ದೆಯ ಹಿಂದೆ ಬಿದ್ದಿಲ್ಲ ಎಂದು ಜೊತೆಗಾರ ಪಕ್ಷಗಳಿಗೆ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸೀಟು ಗೆದ್ದಿಲ್ಲ, ಬದಲಿಗೆ ಮಿತ್ರ ಪಕ್ಷಗಳ ಸಹಕಾರದಿಂದ ಗೆದ್ದಿದ್ದು. ಆದರೆ ಗೆದ್ದ ಬಳಿಕ ಬಿಜೆಪಿ ಮಿತ್ರ ಪಕ್ಷಗಳನ್ನು ದೂರ ಮಾಡಿತ್ತು, ಈಗ ಮತ್ತೆ ಮಿತ್ರ ಪಕ್ಷಗಳಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here