ತಡರಾತ್ರಿ ಮೊಬೈಲ್ನಲ್ಲಿ ಮಾತಾಡಬೇಡ ಎಂದ ಅತ್ತೆಯನ್ನೇ ಸೊಸೆಯೊಬ್ಬರು ಹತ್ಯೆ ಮಾಡಿರುವ ಪ್ರಕರಣ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ತನ್ನ ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಮಗ ಅಜಯ್ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಪೊಲೀಸರಿಗೆ ಅಜಯ್ ಮಾಹಿತಿ ನೀಡಿದ್ದು, ನನ್ನ ಹೆಂಡತಿಗೆ ಕರೆ ಮಾಡಿದಾಗ ಕೆಲಸದಲ್ಲಿದ್ದನೆಂದು ತಿಳಿಸಿದ್ದಾಳೆ. ಅತ್ತೆ ಗಾಯಗೊಂಡ ಸ್ಥಿತಿಯಲ್ಲಿ ಹೊರಗಿನಿಂದ ಮನೆಗೆ ಬಂದಿದ್ದಾಳೆ ಎಂದು ಹೇಳಿದ್ದಾಳೆ. ಅವರು ತಕ್ಷಣವೇ ಮನೆಗೆ ತಲುಪಿದಾಗ ತಾಯಿ ಸತ್ತಿದ್ದರು ಎಂದು ಹೇಳಿದ್ದಾರೆ.
ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ, ಆಕೆ ಆರಂಭದಲ್ಲಿ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾಳೆ, ಆದರೆ ತೀವ್ರ ವಿಚಾರಣೆ ವೇಳೆ ಅವಳು ತನ್ನ ಅತ್ತೆಯನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾಳೆ.
ಹಟ್ಟಾ ಪೊಲೀಸ್ ಠಾಣೆಯ ಪ್ರಭಾರಿ ಎಚ್ಆರ್ ಪಾಂಡೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ವಿಚಾರಣೆ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಮೊಬೈಲ್ ಫೋನ್ ಬಳಸುತ್ತಿರುವ ಬಗ್ಗೆ ಅತ್ತೆ ತನ್ನ ಪತಿಗೆ ಪದೇ ಪದೇ ದೂರು ನೀಡುತ್ತಿದ್ದಳು ಎಂದು ಅವರು ಹೇಳಿದರು.
ಕೆಲ ದಿನಗಳ ಹಿಂದೆ ರಾತ್ರಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಅತ್ತೆ ಮತ್ತೆ ಪತಿಗೆ ದೂರು ನೀಡಿದ್ದು, ಬಳಿಕ ಆಕೆಯಿಂದ ಫೋನ್ ಕಿತ್ತುಕೊಳ್ಳಲಾಯಿತು. ಇದರಿಂದ ಸಿಟ್ಟಿಗೆದ್ದಿದ್ದ ಅವಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುಪಿತಗೊಂಡ ಅತ್ತೆಯ ತಲೆಗೆ ಹೊಡೆದಿದ್ದಾಳೆ. ಅತ್ತೆ ಸ್ಥಳದಲ್ಲೇ ಸಾವಗೀಡಾಗಿದ್ದಾಳೆ. ನಂತರ ಆಕೆ ಅನುಮಾನದಿಂದ ಪಾರಾಗಲು ಕಥೆಯೊಂದನ್ನು ಹೆಣೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದು, ಮಹಿಳೆಯನ್ನು ಬಂಧಿಸಲಾಗಿದೆ.