ಚಿನ್ನದ ಹುಡುಗನಿಂದ ಮತ್ತೊಂದು ದಾಖಲೆ : ‘ಡೈಮಂಡ್’ ಲೀಗ್ ಕಿರೀಟ ನೀರಜ್ ಮುಡಿಗೆ

Diamond League

ಒಲಂಪಿಕ್ಸ್​ನ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ (Neeraj Chopra), ಮತ್ತೊಂದು ಸಾಧನೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

88.44 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಪ್ರತಿಷ್ಠಿತ ಡೈಮಂಡ್ (Diamond League) ಲೀಗ್ ಪ್ರಶಸ್ತಿ ಗೆದ್ದಿದ್ದು ಇತಿಹಾಸ ನಿರ್ಮಿಸಿದ್ದಾರೆ.

ಡೈಮಂಡ್ ಲೀಗ್‌ನ (Diamond League) ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯರೊಬ್ಬರು ಪ್ರಶಸ್ತಿ ಗೆದ್ದಿರುವುದು ದಾಖಲೆಯಾಗಿದೆ.  ಜುಲೈನಲ್ಲಿ ಅಮೆರಿಕದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ (Neeraj Chopra) ಚಿನ್ನ ಗೆದ್ದಿದ್ದರು. ಇದನ್ನೂ ಓದಿ : ಚಿನ್ನದ ಹುಡುಗ ನೀರಜ್ ಚೋಪ್ರಾರ ಹೊಸ ದಾಖಲೆ – ‘ಡೈಮಂಡ್​​ ಲೀಗ್’​ನಲ್ಲಿ ಅಗ್ರಸ್ಥಾನ

LEAVE A REPLY

Please enter your comment!
Please enter your name here