ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಸಿನೆಮಾ ಸದ್ದು.. ವಿಚಾರಣೆ ನಡೆಯುತ್ತಿದೆ ಚಿತ್ರದ ಎರಡನೇ ಲಿರಿಕಲ್ ಸಾಂಗ್, ನೀನೆ ರಕ್ಷಕ.. ಲಹರಿ ಮ್ಯೂಸಿಕ್ನಲ್ಲಿ ರಿಲೀಸ್ ಆಗಿದ್ದು, ಎಲ್ಲಾ ಕಡೆಯಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಕೆಜಿಎಫ್ 2 ಖ್ಯಾತಿಯ ರವಿ ಬಸ್ರೂರ್ ಮತ್ತು ಅವರ ಸಹೋದರ ಸಚಿನ್ ಬಸ್ರೂರ್ ಈ ಹಾಡನ್ನು ಹಾಡಿರುವುದು ವಿಶೇಷ. ಸಚಿನ್ ಬಸ್ರೂರ್ ಸಂಗೀತ ಈ ಚಿತ್ರಕ್ಕೆ ಇದೆ.
ನವ ನಟ ಮಧುನಂದನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಈ ಹಾಡಿನಲ್ಲಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಯಾವುದೋ ಅಪರಾಧ ಪ್ರಕರಣವನ್ನು ಬೇಧಿಸುವ ಸೀರಿಯಸ್ ಪಾತ್ರದಲ್ಲಿ ಮಧುನಂದನ್ ಅಭಿನಯಿಸಿದ್ದಾರೆ, ಡಿಫ್ರೆಂಟ್ ಮ್ಯಾನರಿಸಂನಿಂದ ಮಧುನಂದನ್ ಗಮನ ಸೆಳೆದಿದ್ದಾರೆ.