ಶಾರೂಖ್ ಖಾನ್ ಮಗನ ಬಂಧನಕ್ಕೆ ಸ್ಫೋಟಕ ತಿರುವು – NCB ದಾಳಿ ವೇಳೆ ಇದ್ದ ಬಿಜೆಪಿ ಉಪಾಧ್ಯಕ್ಷ..!

ಬಾಲಿವುಡ್ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಮಾದಕ ದ್ರವ್ಯ ಪಾರ್ಟಿ ಮಾಡುತ್ತಿದ್ದ ಐಷಾರಾಮಿ ಹಡಗಿನ ಮೇಲೆ ರಾಷ್ಟಿçÃಯ ಮಾದಕ ದ್ರವ್ಯ (ಎನ್‌ಸಿಬಿ) ನಡೆಸಿದ್ದ ದಾಳಿಗೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಎನ್‌ಸಿಬಿ ದಾಳಿಯ ಸಾಚಾತನದ ಬಗ್ಗೆ ಈಗ ಅನುಮಾನಗಳು ಮೂಡಿವೆ.

ಎನ್‌ಸಿಬಿ ದಾಳಿ ವೇಳೆ ಬಿಜೆಪಿ ಉಪಾಧ್ಯಕ್ಷ ಮನೀಶ್ ಭಾನುಶಾಲಿ ಮತ್ತು ಖಾಸಗಿ ಪತ್ತೇದಾರಿ ಎಸ್‌ಕೆ ಗೋವಸಾಯಿ ಕೂಡಾ ಇದ್ದರು. ದಾಳಿ ಬಳಿಕ ಆರ್ಯನ್‌ಖಾನ್ ಮತ್ತು ಇತರೆ ಆರೋಪಿಗಳನ್ನು ಎನ್‌ಸಿಬಿ ಕರೆದೊಯ್ದಿದ್ದು ಇವರೇ. ಆರೋಪಿಗಳನ್ನು ಹಿಡಿದುಕೊಂಡು ಹೋಗುವ ದೃಶ್ಯದಲ್ಲಿ ಮನೀಶ್ ಭಾನುಶಾಲಿ ಮತ್ತು ಗೋವಸಾಯಿ ಇದ್ದಾರೆ.

ದಾಳಿಯ ಬಳಿಕ ಎನ್‌ಸಿಬಿ ಕಸ್ಟಡಿಯಲ್ಲಿದ್ದ ಆರ್ಯನ್ ಖಾನ್ ಜೊತೆಗೆ ಗೋಸಾವಿ ಸೆಲ್ಫಿ ತೆಗೆಸಿಕೊಂಡಿದ್ದ. ಕಸ್ಟಡಿಯಲ್ಲಿ ಅಧಿಕಾರಿ ಹೇಗೆ ಫೋಟೋ ತೆಗೆಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಕೇಳಿದ್ದಾಗ ಸೆಲ್ಫಿ ತೆಗೆಸಿಕೊಂಡಿದ್ದ ವ್ಯಕ್ತಿ ಎನ್‌ಸಿಬಿ ಅಧಿಕಾರಿ ಅಲ್ಲ ಎಂದು ಎನ್‌ಸಿಬಿ ಸ್ಪಷ್ಟಪಡಿಸಿತ್ತು.

ಇನ್ನು ಮನೀಶ್ ಭಾನುಶಾಲಿ ಬಿಜೆಪಿ ಉಪಾಧ್ಯಕ್ಷನಾಗಿದ್ದು ಆತ ಬಿಜೆಪಿ ನಾಯಕರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿರುವ ಸಾಕ್ಷö್ಯವೂ ಸಿಕ್ಕಿದೆ.

ಇನ್ನು ಗೋವಸಾಯಿ ಮೇಲೆ ಉದ್ಯೋಗ ಕೆಲಸ ಕೊಡುವ ನೆಪದಲ್ಲಿ 3 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಪ್ರಕರಣ ಈ ಹಿಂದೆ ದಾಖಲಾಗಿತ್ತು.

ಅತ್ಯಂತ ಗೌಪ್ಯವಾಗಿ ನಡೆಯಬೇಕಿದ್ದ ಎನ್‌ಸಿಬಿ ದಾಳಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಮತ್ತು ಖಾಸಗಿ ಪತ್ತೇದಾರಿ ವ್ಯಕ್ತಿ ಅದೂ ವಂಚನೆ ಕೇಸ್‌ನಲ್ಲಿ ಆರೋಪಿ ಆಗಿದ್ದ ವ್ಯಕ್ತಿ ಹೇಗೆ ಭಾಗಿ ಆದರೂ ಎಂಬುದೇ ಪ್ರಶ್ನೆ ಎದ್ದಿದೆ.

ಮುಂಬೈನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಐಷಾರಾಮಿ ಹಡಗಿನ ಮೇಲೆ ದಾಳಿ ಮಾಡಿದಾಗ ವಶಪಡಿಸಿಕೊಳ್ಳಲಾಗಿತ್ತು ಎನ್‌ಸಿಬಿ ತೋರಿಸಿರುವ ಮಾದಕ ದ್ರವ್ಯಗಳ ಫೋಟೋ ಅದು ಹಡಗಿನಲ್ಲಿ ಸಿಕ್ಕಿದ್ದಲ್ಲ, ಬದಲಿಗೆ ಎನ್‌ಸಿಬಿ ನಿರ್ದೇಶಕರ ಕಚೇರಿಯಲ್ಲಿ ತೆಗೆದಿದ್ದು. ಹಡಗಿನಲ್ಲಿ ಎನ್‌ಸಿಬಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.

ಅಲ್ಲದೇ ಶಾರೂಖ್ ಖಾನ್ ಮಗನ ಮೇಲೆ ಎನ್‌ಸಿಬಿ ದಾಳಿ ಮಾಡಲಿದೆ ಎಂದು ತಿಂಗಳಿನಿAದಲೇ ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್‌ಗಳು ಹರಿದಾಡಿದ್ದವು ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here