ವಿನಯ ಗುರೂಜಿ ಪಾದಪೂಜೆ ಮಾಡಿದ ಮೋಟಮ್ಮ ಮಗಳು ನಯನ ಮೋಟಮ್ಮ – ಟೀಕೆಗಳ ಸುರಿಮಳೆ

Nayana Motamma
Nayana Motamma
ಮಾಜಿ ವಿಧಾನಪರಿಷತ್​ ಸದಸ್ಯೆ ಮೋಟಮ್ಮ (Motamma) ಮತ್ತು ಅವರ ಮಗಳು ಕೆಪಿಸಿಸಿ (KPCC) ಪ್ರಧಾನ ಕಾರ್ಯದರ್ಶಿ ನಯನ ಮೋಟಮ್ಮ (Nayana Motamma) ಅವರು ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಮೋಟಮ್ಮ ಅವರ ಮನೆಗೆ ಅವಧೂತ ಗುರೂಜಿ (Vinay Guruji) ಎಂದೇ ಕರೆಸಿಕೊಳ್ಳುವ ವಿನಯ ಗುರೂಜಿ ಅವರು ಭೇಟಿ ನೀಡಿದ್ದರು. ಈ ವೇಳೆ ವಿನಯ ಗುರೂಜಿ ಪಾದದ ಬಳಿಕ ಕುಳಿತ ನಯನ ಮೋಟಮ್ಮ ವಿನಯ ಗುರೂಜಿ ಅವರ ಪಾದ ತೊಳೆದು ಹೂ ಸುರಿಸಿ ಅಗರಬತ್ತಿಯಿಂದ ಪಾದಪೂಜೆ ಮಾಡಿದರು.
Nayana Motamma Vinay Guruji
Nayana Motamma Vinay Guruji
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಅವಧೂತರಾದ ಶ್ರೀ ಶ್ರೀ ವಿನಯ ಗುರೂಜಿಯವರು ಇಂದು ನಮ್ಮ ಮನೆಗೆ ಭೇಟಿ ನೀಡಿದ್ರು. ಆ ವೇಳೆ ಗುರೂಜಿಯವರ ದಿವ್ಯ ಆಶೀರ್ವಾದ ಪಡೆದು ಧನ್ಯಳಾದೆ
ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದರು.

ಇವರ ಪೋಸ್ಟ್​ಗೆ ಟೀಕೆಗಳು ಕೇಳಿಬಂದಿವೆ.

LEAVE A REPLY

Please enter your comment!
Please enter your name here