Narendra Modi Medical College : ಎಎಮ್​ಸಿ ಮೆಡಿಕಲ್​ ಕಾಲೇಜಿಗೆ ಪ್ರಧಾನಿ ಹೆಸರು

Narendra Modi Medical College

ಗುಜರಾತ್​ನ ಅಹ್ಮದಾಬಾದ್​ನ ಮಣಿನಗರ್ ಮುನ್ಸಿಪಲ್ ಕಾರ್ಪೋರೇಷನ್ ಎಎಮ್​ಸಿ ಎಮ್​ಇಟಿ ಮೆಡಿಕಲ್ ಕಾಲೇಜಿಗೆ ನರೇಂದ್ರ ಮೋದಿ ಮೆಡಿಕಲ್ ಕಾಲೇಜು (Narendra Modi Medical College) ಎಂದು ಹೆಸರು ಬದಲಾಯಿಸಿದೆ.

ಮಣಿನಗರದ ಅಮ್ದವದ್ ಮುನ್ಸಿಪಲ್ ಕಾರ್ಪೋರೇಷನ್ ಇಂದು ನಡೆಸಿದ ಕಮಿಟಿ ಸಭೆಯಲ್ಲಿ ಎಎಮ್​ಸಿ ಕಾಲೇಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi Medical College) ಹೆಸರು ಮರುನಾಮಕರಣ ಮಾಡಲು ತೀರ್ಮಾನಿಸಿದೆ.

ಮಣಿನಗರದ ಎಲ್​ಜಿ ಆಸ್ಪತ್ರೆಯ ಆವರಣದಲ್ಲಿ ಎಎಮ್​ಸಿ ಮೆಡಿಕಲ್ ಎಜ್ಯುಕೇಷನ್ ಟ್ರಸ್ಟ್​​ ಈ ಕಾಲೇಜನಲ್ಲಿ ನಡೆಸುತ್ತಿದೆ. ಈ ಕಾಲೇಜಿನಲ್ಲಿ ಎಮ್​ಬಿಬಿಎಸ್​ ಮತ್ತು ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್​​ಗಳನ್ನು ಕಲಿಸಲಾಗುತ್ತದೆ.

ಗುಜರಾತ್​ನ ಸಿಎಂ ಆಗಿ ಇದೀಗ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಹೆಸರನ್ನು ಅಜರಾಮರವಾಗಿಸಲು ಸೆ.17 ರಂದು ಅವರ ಹುಟ್ಟುಹಬ್ಬದಂದೇ ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಎಎಮ್​ಸಿ ಹೇಳಿದೆ.

ಈ ಹಿಂದೆ ಫೆಬ್ರವರಿ 21, 2021 ರಂದು ಗುಜರಾತ್​ನ ಅಹ್ಮದಬಾದ್​ನ ಸರ್ದಾರ್ ವಲ್ಲಭಾಯ್ ಪಟೇಲ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರನ್ನು ಮರುನಾಮಕರಣ ಮಾಡಲಾಗಿತ್ತು. ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ 10 ಲಕ್ಷ ಹುದ್ದೆಗಳ ನೇಮಕಾತಿ – ಪ್ರಧಾನಿ ನರೇಂದ್ರ ಮೋದಿ ಸೂಚನೆ

LEAVE A REPLY

Please enter your comment!
Please enter your name here