ಅನರ್ಹ ಶಾಸಕ ನಾರಾಯಣಗೌಡ ಕೈ ಮುಗಿದಿದ್ದು ಯಾಕೆ..? ವೀಡಿಯೋ ನೋಡಿ..!

ಕುರುಬ ಸಮುದಾಯದ ಈಶ್ವರಾನಂದ ಸ್ವಾಮೀಜಿ ಬಗ್ಗೆ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಆಡಿದ್ದಾರೆ ಎನ್ನಲಾಗಿರುವ ಅವಹೇಳನಕಾರಿ ಮಾತು ಈಗ ಅನರ್ಹ ಶಾಸಕರ ನಿದ್ದೆಗೆಡಿಸಿದೆ. ಕುರುಬ ಮತಗಳೇ ನಿರ್ಣಾಯಕ ಆಗಿರುವ ಕೆ ಆರ್‌ ಪೇಟೆ ಮತ್ತು ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿರುವ ನಾರಾಯಣಗೌಡ ಮತ್ತು ಹುಣಸೂರಿನಿಂದ ಕಣಕ್ಕಿಳಿದಿರುವ ಎಚ್‌ ವಿಶ್ವನಾಥ್‌ಗೆ ಮುಗ್ಗಲ ಮುಳ್ಳಾಗಿ ಕಾಡುವ ಭೀತಿ ಎದುರಾಗಿದೆ.

ಈ ಬಗ್ಗೆ ಕೆ ಆರ್‌ ಪೇಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಾರಾಯಣಗೌಡ ಕೈ ಮುಗಿದರು. ದಯವಿಟ್ಟು ವಿವಾದಿತ ಹೇಳಿಕೆಗಳಿಂದ ಮತ ಗಳಿಸಬೇಡಿ. ಕಾರ್ಯಕ್ರಮಗಳಿಂದ ಮತ ಗಳಿಸಿರಿ ಎಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ಆಗ್ರಹಿಸಿದರು. ಅಲ್ಲದೇ ವಿವಾದದ ಹಿಂದೆ ಜೆಡಿಎಸ್‌ ಕೈವಾಡ ಇದೆ ಎಂದೂ ಆರೋಪಿಸಿದರು.

 

LEAVE A REPLY

Please enter your comment!
Please enter your name here