Nandi Hills | ಮತ್ತೊಮ್ಮೆ ಗುಡ್ಡ ಕುಸಿತ, ದೊಡ್ಡ ಬಂಡೆ ಉರುಳುವ ಆತಂಕ

Nandi Hills

ವಿಶ್ವವಿಖ್ಯಾತ ನಂದಿಗಿರಿಧಾಮದ (Nandi Hills) ರಸ್ತೆಯಲ್ಲಿ ಮತ್ತೊಮ್ಮೆ ಗುಡ್ಡ ಕುಸಿತವಾಗಿದ್ದು, ಮಾರ್ಗ ಮಧ್ಯೆ ಬೃಹತ್ ಬಂಡೆಯೊಂದು ಬಿದ್ದಿದೆ.

ಮಿರ್ಜಾ ಸರ್ಕಲ್ ಮುಂಭಾಗದ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆಗೆ ನಂದಿಬೆಟ್ಟದಲ್ಲಿ ಗುಡ್ಡ ಕುಸಿತವಾಗಿದೆ. ಮಣ್ಣು ಹಾಗೂ ಬಂಡೆಗಳು ರಸ್ತೆಯ ಮುಕ್ಕಾಲು ಭಾಗ ಆವರಿಸಿವೆ. ಇದೀಗ ಮತ್ತೊಂದು ಬೃಹದಾಕಾರದ ಬಂಡೆ ಸಹ ಉರುಳುವ ಆತಂಕ ಎದುರಾಗಿದೆ. ಸದ್ಯ ಆತಂಕದಲ್ಲೇ ನಂದಿಬೆಟ್ಟ (Nandi Hills) ಗೆ ವಾಹನಗಳು ಸಂಚರಿಸುತ್ತಿವೆ.

ಕಳೆದ ಜೂನ್ ತಿಂಗಳಿನಲ್ಲಿಯೂ ಭಾರೀ ಮಳೆಗೆ ಎರಡು ಕಡೆಗಳಲ್ಲಿ ಗುಡ್ಡಕುಸಿತವಾಗಿತ್ತು. ಸುಲ್ತಾನಪೇಟೆ ಗ್ರಾಮದ ಕಡೆ ಎರಡು ಕಡೆ ಗುಡ್ಡಗಳು ಕುಸಿದಿದೆ. ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಭೂ ಕುಸಿತವಾಗಿತ್ತು. ಇದನ್ನೂ ಓದಿ : ವಿಶ್ವವಿಖ್ಯಾತ ನಂದಿ ಬೆಟ್ಟದಲ್ಲಿ ರೂಪ್ ವೇ ನಿರ್ಮಾಣ- ಸಚಿವ ಸಿ.ಪಿ.ಯೋಗೇಶ್ವರ್​​

LEAVE A REPLY

Please enter your comment!
Please enter your name here