Namma Metro: ಬೆಂಗಳೂರು ರೈಲು ಓಡಾಟದಲ್ಲಿ ವ್ಯತ್ಯಯ – ಪ್ರಯಾಣಿಕರೇ ಗಮನಿಸಿ

ಬೆಂಗಳೂರಿಗರೇ ಗಮನಿಸಿ. ಗುರುವಾರ ಅಂದರೆ ಆಗಸ್ಟ್​ 17ರಂದು ಇಡೀ ದಿನ ಕೆಂಗೇರಿ ಮತ್ತು ಮೈಸೂರು ರಸ್ತೆ ಮೆಟ್ರೋ ಸ್ಟೇಷನ್​ ನಡುವೆ ಇಡೀ ದಿನ ಮೆಟ್ರೋ ರೈಲುಗಳ ಓಡಾಟ ಇರಲ್ಲ.

ಈ ಬಗ್ಗೆ ನಮ್ಮ ಮೆಟ್ರೋ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಆ ದಿನ ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ರೈಲುಗಳ ಓಡಾಟ ಇರಲಿದೆ.

ಆಗಸ್ಟ್​ 23 ಬುಧವಾರದಿಂದ ಆಗಸ್ಟ್​ 24ರ ಗುರುವಾರ ಬೆಳಗ್ಗೆ 7 ಗಂಟೆಯವರೆಗೆ ಕೆಂಗೇರಿ ಮತ್ತು ಮೈಸೂರು ರಸ್ತೆ ರೈಲು ನಿಲ್ದಾಣದ ನಡುವೆ ಮೆಟ್ರೋ ರೈಲುಗಳ ಓಡಾಟ ಇರಲ್ಲ. ಈ ಅವಧಿಯಲ್ಲಿ ಮೈಸೂರು ರಸ್ತೆ ಮತ್ತು ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್​ ನಡುವೆ ಮಾತ್ರ ಮೆಟ್ರೋ ರೈಲು ಸಂಚರಿಸಲಿದೆ.

ಆಗಸ್ಟ್​ 20ರಂದು ಭಾನುವಾರದಿಂದ ಆಗಸ್ಟ್​ 29ರ ಮಂಗಳವಾರದವರೆಗೆ ಬೈಯಪ್ಪನಹಳ್ಳಿ ಟರ್ಮಿನಲ್​ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ಸ್ಟೇಷನ್​ ಹಾಗೂ ಕೆ ಆರ್​ ಪುರಂ ಮತ್ತು ವೈಟ್​ಫೀಲ್ಡ್​ ಮೆಟ್ರೂ ಮಾರ್ಗಗಳ ನಡುವೆ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಮೆಟ್ರೋ ರೈಲುಗಳ ಓಡಾಟ ಇರಲ್ಲ. ಈ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ಸ್ಟೇಷನ್​ ನಿಲ್ದಾಣದಿಂದ ಮಾತ್ರ ರೈಲು ಸೇವೆ ಲಭ್ಯವಿರಲಿದೆ.

ಆಗಸ್ಟ್​ 23ರಂದು ಬುಧವಾರ ಮತ್ತು ಆಗಸ್ಟ್​ 24ರಂದು ಗುರುವಾರ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಮೈಸೂರು ರಸ್ತೆ ನಿಲ್ದಾಣದಲ್ಲಿ ರೈಲುಗಳ ಸೇವೆ ಕೊನೆಗೊಳ್ಳಲಿದೆ. 

LEAVE A REPLY

Please enter your comment!
Please enter your name here