ನಾಳೆ ರಾತ್ರಿ 9.30ರಿಂದ ಎಂಜಿ ರೋಡ್ ಮತ್ತು ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ರೈಲು ಸಂಚರಿಸಲ್ಲ ಎಂದು ನಮ್ಮ ಮೆಟ್ರೋ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
ಹೀಗಾಗಿ ನಾಳೆ ಅಂದರೆ ಶನಿವಾರ ರಾತ್ರಿ 9.30ರ ಬಳಿಕ ಎಂಜಿ ರೋಡ್ ಮತ್ತು ಕೆಂಗೇರಿ ನಡುವೆ ಮಾತ್ರ ಮೆಟ್ರೋ ರೈಲುಗಳ ಓಡಾಟ ಇರಲಿದೆ.
ಭಾನುವಾರ ಬೆಳಗ್ಗೆ 7 ಗಂಟೆಯಿಂದ ಬಳಿಕ ನಮ್ಮ ಮೆಟ್ರೋ ರೈಲು ಪೂರ್ಣ ಪ್ರಮಾಣದಲ್ಲಿ ಮೆಟ್ರೋ ರೈಲು ಓಡಾಟ ಆರಂಭ ಆಗಲಿದೆ.
ಈ ಹಿನ್ನೆಲೆಯಲ್ಲಿ ಕೆಂಗೇರಿಯಿಂದ ಬೈಯಪ್ಪನಹಳ್ಳಿಗೆ ದಿನದ ಕೊನೆಯ ರೈಲು ರಾತ್ರಿ 8.40ಕ್ಕೆ ಕೆಂಗೇರಿ ನಿಲ್ದಾಣದಿಂದ ಹೊರಡಲಿದೆ.
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಶನಿವಾರ ದಿನದ ಕೊನೆಯ ರೈಲು ರಾತ್ರಿ 9.10ಕ್ಕೆ ಬೈಯಪ್ಪನಹಳ್ಳಿ ನಿಲ್ದಾಣದಿಂದ ಹೊರಡಲಿದೆ.
ಆದರೆ ಹಸಿರು ಮಾರ್ಗದ ರೈಲುಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರಲ್ಲ.
ರೈಲು ಮಾರ್ಗಗಳ ನಿರ್ವಹಣಾ ಉದ್ದೇಶದಿಂದ ಈ ವ್ಯತ್ಯಯ ಉಂಟಾಗಲಿದೆ ಎಂದು ನಮ್ಮ ಮೆಟ್ರೋ ನಿಗಮ ಹೇಳಿದೆ.