ನಾಳೆಯಿಂದ ನಮ್ಮ ಮೆಟ್ರೋ ರೈಲುಗಳ ಓಡಾಟ ಅವಧಿ ವಿಸ್ತರಣೆ

Metro Users

ನಾಳೆಯಿಂದ ಅಂದರೆ ಜುಲೈ 1ರಿಂದ ನಮ್ಮ ಮೆಟ್ರೋ ಓಡಾಟ ವಿಸ್ತರಣೆ ಆಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೆಟ್ರೋ ರೈಲುಗಳ ಓಡಾಟ ಇರಲಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪ್ರತಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ ಎಂದು ನಮ್ಮ ಮೆಟ್ರೋ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಮಾರ್ಟ್ ಕಾರ್ಡ್ ಮಾತ್ರವಲ್ಲದೇ ಟಿಕೆಟ್ ಕೌಂಟರ್‍ಗಳಲ್ಲಿ ಟಿಕೆಟ್ ಟೋಕನ್ ಪಡೆದು ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದು ಹೇಳಿದೆ.

ಆದರೆ ವಾರಾಂತ್ಯದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೆಟ್ರೋ ರೈಲುಗಳ ಓಡಾಟ ಇರಲ್ಲ.

LEAVE A REPLY

Please enter your comment!
Please enter your name here