ನಮ್ಮ ಮೆಟ್ರೋ ರೈಲು ಅವಧಿ ವಿಸ್ತರಣೆ

ನಮ್ಮ ಮೆಟ್ರೋ ರೈಲಿನ ಅವಧಿಯನ್ನು ವಿಸ್ತರಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಿಂದ ನಾಗಸಂದ್ರ, ಬೈಯಪ್ಪನಹಳ್ಳಿ, ಕೆಂಗೇರಿ ಮತ್ತು ರೇಷ್ಮೆ ಟರ್ಮಿನಲ್ ರಾತ್ರಿ 11.30ರವರೆಗೂ ಮೆಟ್ರೋ ರೈಲು ಸಂಚರಿಸಲಿದೆ. ರಾತ್ರಿ 11.30ಕ್ಕೆ ಮೆಜೆಸ್ಟಿಕ್‌ನಿಂದ ದಿನದ ಕಡೆಯ ಮೆಟ್ರೋ ರೈಲು ಸಂಚರಿಸಲಿದೆ.

ಸೋಮವಾರದಿAದ ಶನಿವಾರದವರೆಗೆ ನಾಲ್ಕು ಟರ್ಮಿನಲ್‌ಗಳಾದ ನಾಗಸಂದ್ರ, ಕೆಂಗೇರಿ, ಬೈಯಪ್ಪನಹಳ್ಳಿ ಮತ್ತು ರೇಷ್ಮೆ ಸಂಸ್ಥೆ ಟರ್ಮಿನಲ್ ನಿಂದ ಬೆಳಗ್ಗೆ 6 ಗಂಟೆಯಿAದ ರಾತ್ರಿ 11 ಗಂಟೆಯವರೆಗೆ ಮೆಟ್ರೋ ರೈಲುಗಳ ಓಡಾಟ ಇರಲಿದೆ. ಭಾನುವಾರ ಬೆಳಗ್ಗೆ 7 ಗಂಟೆಯಿAದ ರೈಲುಗಳ ಸಂಚಾರ ಆರಂಭ ಆಗಲಿದೆ.

ಆದರೆ ವಾರದ ಎಲ್ಲ ದಿನಗಳಲ್ಲಿ ರಾತ್ರಿ 11.30ಕ್ಕೆ ಮೆಜೆಸ್ಟಿಕ್ ನಿಂದ ದಿನದ ಕಡೆಯ ಮೆಟ್ರೋ ರೈಲು ನಾಲ್ಕು ಟರ್ಮಿನಲ್ ಗಳಿಗೂ ಸಂಚಾರ ಆರಂಭಿಸಲಿದೆ.

 

LEAVE A REPLY

Please enter your comment!
Please enter your name here