ಬಿಜೆಪಿಗೆ ಹೀನಾಯ ಸೋಲು: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಕಟೀಲ್​ ರಾಜೀನಾಮೆ

Nalin Kumar Kateel

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್​ ಕುಮಾರ್​ ಕಟೀಲ್​ ಅವರು ರಾಜೀನಾಮೆ ನೀಡಿದ್ದಾರೆ.

ಚುನಾವಣಾ ಫಲಿತಾಂಶ ಬಂದ 1 ತಿಂಗಳು 10 ದಿನದ ಬಳಿಕ ರಾಜೀನಾಮೆ ಬಗ್ಗೆ ಮೊದಲ ಬಾರಿಗೆ ಕಟೀಲ್​ ಅವರು ಹೇಳಿದ್ದಾರೆ.

ನನ್ನ ಅವಧಿ ಮುಗಿದಿದೆ, ಹೀಗಾಗಿ ಸಹಜವಾಗಿ ಬದಲಾವಣೆ ನಡೆಯುತ್ತದೆ. ಎರಡು ಅವಧಿ ನಾನು ಪೂರ್ಣಗೊಳಿಸಿದ್ದೇನೆ. ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದೇನೆ, ಲಿಖಿತ ಮತ್ತು ಮೌಖಿಕವಾಗಿ ರಾಜೀನಾಮೆ ಸಲ್ಲಿಸಿದ್ದೇನೆ

ಎಂದು ಕಟೀಲ್​ ಅವರು ಬಳ್ಳಾರಿಯಲ್ಲಿ ಹೇಳಿದ್ದಾರೆ.