ಕೋವಿಡ್​ ಲಸಿಕೆ ತೆಗೆದುಕೊಂಡರೆ ಮಕ್ಕಳಾಗಲ್ಲ – ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​ ಹೊಸ ವಿವಾದ

ಕೋವಿಡ್​ ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹೇಳಿದ್ದಾರೆ.

ಕೋವಿಡ್​ ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ತಮ್ಮದೇ ಪಕ್ಷದ ವಿಧಾನಪರಿಷತ್​ ಸದಸ್ಯ ಮಂಜುನಾಥ್​ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ನಳೀನ್​ ಕುಮಾರ್​ ಕಟೀಲ್​ ಅವರು ಬಹಿರಂಗ ಸಮಾವೇಶದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಕೋವಿಡ್​ ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಬಿಜೆಪಿ ಎಂಎಲ್​ಸಿ ಅವರು ನೀಡಿದ್ದ ಹೇಳಿಕೆಯ ಸಮರ್ಥನೆಗೆ ಕಟೀಲ್​ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಉದಾಹರಣೆಯನ್ನು ನೀಡಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಬಿಜೆಪಿ ಸಂಕಲ್ಪಯಾತ್ರೆಯಲ್ಲಿ ಮಾತಾಡಿದ ಪಕ್ಷದ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​,

`ರಾಹುಲ್​ ಗಾಂಧಿ, ಸಿದ್ರಾಮಣ್ಣ ಹೇಳಿದ್ರು ಲಸಿಕೆ ತಗೋಬೇಡಿ ಮಕ್ಕಳಾಗುವುದಿಲ್ಲ, ಲಸಿಕೆ ತಗೋಬೇಡಿ ಮಕ್ಕಳಾಗುವುದಿಲ್ಲ, ಲಸಿಕೆ ತಗೋಬೇಡಿ ಮಕ್ಕಳಾಗುವುದಿಲ್ಲ. ಆದರೆ ರಾತ್ರಿ ಕದ್ದು ಹೋಗಿ ರಾಹುಲ್​ ಗಾಂಧಿ, ಸಿದ್ರಾಮಣ್ಣ ಲಸಿಕೆ ತಗೊಂಡ್ರು. ನಮ್ಮ ಎಂಎಲ್​​ಸಿ ಮಂಜುನಾಥ್​ ಹೇಳಿದ್ರು, ಅದಕ್ಕೆ ರಾಹುಲ್​ ಗಾಂಧಿಗೆ ಮದುವೆ ಆಗುವುದಿಲ್ಲ, ಮಕ್ಕಳಾಗುವುದಿಲ್ಲ ಅಂತ ಹೇಳಿ’

ಎಂದು ಭಾಷಣ ಮಾಡಿದ್ದಾರೆ.

ಈ ಮೂಲಕ ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಕೋವಿಡ್​ ಲಸಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರೇ ಅಪಪ್ರಚಾರ ಮಾಡಿದ್ದು ವಿಪರ್ಯಾಸ.

ಕೋವಿಡ್​ ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂಬ ತಮ್ಮದೇ ಪಕ್ಷದ ಎಂಎಲ್​ಸಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಅಲ್ಲಗಳೆಯುವುದರ ಬದಲು, ಆ ಅಭಿಪ್ರಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷರು ರಾಹುಲ್​ ಗಾಂಧಿ ಅವರಿಗೆ ಆರೋಪಿಸಿ ಪಕ್ಷದ ಬಹಿರಂಗ ಸಮಾವೇಶದಲ್ಲಿ ಸಮರ್ಥಿಸಿಕೊಂಡಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷರ ವಿವಾದಿತ ಮಾತುಗಳು ಇದೇ ಮೊದಲಲ್ಲ.

LEAVE A REPLY

Please enter your comment!
Please enter your name here