ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಜೂನ್ 1ರಿಂದ ಆಗಿರುವ ಟೋಲ್ ದರ ಹೆಚ್ಚಳವನ್ನು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಹೊಸ ಆರ್ಥಿಕ ವರ್ಷ ಶುರುವಾದಾಗ ಇಡೀ ದೇಶದಲ್ಲಿ ಟೋಲ್ ದರ ಹೆಚ್ಚಳ ಆಗುವುದು ಸಹಜ. ಈ ಹೈವೇಗೆ ಏಪ್ರಿಲ್ನಲ್ಲಿ ಟೋಲ್ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ. ಈಗ ಶೇಕಡಾ 22ರಷ್ಟು ಏರಿಕೆ ಆಗಿದೆ
ಎಂದು ಪ್ರತಾಪ್ ಸಿಂಹ ಅವರು ಸಮರ್ಥಿಸಿಕೊಂಡಿದ್ದಾರೆ.
ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ವರ್ಕ್ ಆಗ್ತಿದೆ. ಯಾವ ಸಮಸ್ಯೆಯೂ ಇಲ್ಲ. ಟೋಲ್ ಸಂಗ್ರಹದ ಆರಂಭದಲ್ಲಿ ಫಾಸ್ಟ್ಟ್ಯಾಗ್ ಸಮಸ್ಯೆ ಇತ್ತು. ಆದರೆ ಈಗ ಈ ಸಮಸ್ಯೆ ಇಲ್ಲ. ಫಾಸ್ಟ್ ಟ್ಯಾಗ್ ಇರದೆ ಇದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯ
ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಏಪ್ರಿಲ್ 1ರಿಂದ ಟೋಲ್ ದರ ಹೆಚ್ಚಳ ಆದಾಗ ಆಗ ಸಂಸದ ಪ್ರತಾಪ್ ಸಿಂಹ ಅವರು ಏಕಾಏಕಿ ಟೋಲ್ ದರ ಹೆಚ್ಚಳ ಮಾಡದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.
ಮಾರ್ಚ್ 12ರಂದು ಪ್ರಧಾನಿ ಮೋದಿ ಅವರು 58 ಕಿಲೋ ಮೀಟರ್ ದೂರದ ಎಕ್ಸ್ಪ್ರೆಸ್ ವೇಯನ್ನು ಉದ್ಘಾಟಿಸಿದ್ದರು.
ಇದಾದ ಮೂರನೇ ತಿಂಗಳಿಗೆ ಟೋಲ್ ದರ ಶೇಕಡಾ 20ರಷ್ಟು ಹೆಚ್ಚಳ ಆಗಿದೆ.
ADVERTISEMENT
ADVERTISEMENT