ಮೈಸೂರು ಅಭಿವೃದ್ಧಿ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಅವರು ಇಂದು ಕಾಂಗ್ರೆಸ್ ಮುಖಂಡರಿಗೆ ಪಂಥಾಹ್ವಾನ ನೀಡಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಪ್ರತಾಪ್ ಸಿಂಹ ಬಹಿರಂಗ ಚರ್ಚೆಯ ಆಹ್ವಾನ ಸ್ವೀಕರಿಸುವ ಕಾಂಗ್ರೆಸ್ ನಾಯಕರು ಮೇಜು, ಕುರ್ಚಿ ಸಮೇತ ಸಂಸದರ ಕಚೇರಿಯತ್ತ ಹೊರಟಿದ್ದಾರೆ.
ಕಾಂಗ್ರೆಸ್, ಸಂಸದರೊಂದಿನ ಸಂವಾದಕ್ಕಾಗಿ ತೆರೆದ ವಾಹನದಲ್ಲಿ ವೇದಿಕೆ ಸಜ್ಜುಗೊಳಿಸಿದ್ದು, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನ ಕಾಂಗ್ರೆಸ್ ಕಚೇರಿಯಿಂದ ಪ್ರತಾಪ್ ಸಿಂಹ ಕಚೇರಿಯತ್ತ ಮೆರವಣಿಗೆ ಹೊರಟಿದ್ದಾರೆ.
ಮೈಸೂರಿನ ಅಭಿವೃದ್ಧಿ ಬಗ್ಗೆ ಚರ್ಚೆ ಮಅಡು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯನವರಿಗೆ ಬಹಿರಂಗ ಪಂಥಾಹ್ವಾನ ನೀಡಿದ್ದರು. ಈ ಪಂಥಾಹ್ವಾನ ಸ್ವೀಕರಿಸಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ಕಾಂಗ್ರೆಸ್ ಪರವಾಗಿ ಚರ್ಚೆಗೆ ಬರಲಿದ್ದಾರೆ ಎಂದು ಘೋಷಿಸಿದ್ದರು. ಈ ಬೆನ್ನಲ್ಲೇ, ಸಂಸದ ಪ್ರತಾಪ್ ಸಿಂಹ ಚರ್ಚೆಗೆ ಸಿದ್ದ ಎಂದು ಘೋಷಣೆ ಮಾಡಿದ್ದರು.
ಇದೀಗ, ಕಾಂಗ್ರೆಸ್ ವಕ್ತಾರರು ಸಂಸದರ ಕಚೇರಿಗೆ ಬಹಿರಂಗ ಚರ್ಚೆ ಮಾಡಲು ಮೆರವಣಿಗೆ ಮೂಲಕ ಮೇಜು, ಖುರ್ಚಿ ಸಮೇತ ಹೊರಟಿದ್ದಾರೆ.